ಕಾಸರಗೋಡು: ಕೂಡ್ಲು ಶಿವಮಂಗಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ಫೆ.21 ಶುಕ್ರವಾರ ಮಹಾಶಿವರಾತ್ರಿ ಉತ್ಸವದೊಂದಿಗೆ ಧ್ವಜಾರೋಹಣಗೊಂಡು ಐದು ದಿನಗಳ ಪರ್ಯಂತ ಜಾತ್ರಾ ಮಹೋತ್ಸವ ನಡೆಯಲಿದೆ.
ಫೆ.21 ರಂದು ಬೆಳಗ್ಗೆ 8 ರಿಂದ ಉಷ:ಪೂಜೆ, ಗಣಹೋಮ, ನವಕ, 10.30 ಕ್ಕೆ ಧ್ವಜಾರೋಹಣ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 7 ರಿಂದ ಭಜನೆ, 8 ರಿಂದ ನೃತ್ಯ ಕಾರ್ಯಕ್ರಮ, 22 ರಂದು ಬೆಳಗ್ಗೆ 7.30 ಕ್ಕೆ ಉತ್ಸವ ಬಲಿ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ರಾತ್ರಿ 7 ರಿಂದ ಭಜನೆ, 9 ಕ್ಕೆ ಸಣ್ಣ ದೀಪೆÇೀತ್ಸವ, ರಂಗಪೂಜೆ, ಉತ್ಸವ ಬಲಿ ನಡೆಯುವುದು.
ಫೆ.23 ರಂದು ಬೆಳಗ್ಗೆ 7.30 ರಿಂದ ಉತ್ಸವ ಬಲಿ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ರಾತ್ರಿ 7 ರಿಂದ ಭಜನೆ, 9 ರಿಂದ ನಡುದೀಪೆÇೀತ್ಸವ, ಕೂಡ್ಲು ರಾಮದಾಸನಗರಕ್ಕೆ ಶೋಭಾಯಾತ್ರೆ, ಕಟ್ಟೆಪೂಜೆ, 24 ರಂದು ಬೆಳಗ್ಗೆ 7.30 ರಿಂದ ಉತ್ಸವ ಬಲಿ, ಅಯ್ಯಂಗಾಯಿ, ದರ್ಶನ ಬಲಿ, ಮಧ್ಯಾಹ್ನ 12 ಕ್ಕೆ ಮಹಾಪೂಜೆ, ಸಂಜೆ 6.30 ರಿಂದ ಭಜನೆ, ರಾತ್ರಿ 9 ರಿಂದ ನೃತ್ಯ ವೈವಿಧ್ಯ, ಉತ್ಸವ ಬಲಿ, ಬೆಡಿ ಸೇವೆ, ದರ್ಶನ ಬಲಿ ನಡೆಯಲಿದೆ.
ಫೆ.25 ರಂದು ಬೆಳಗ್ಗೆ 9 ಕ್ಕೆ ಕವಾಟೋದ್ಘಾಟನೆ, ಪೂಜೆ, ಸಂಜೆ 5.30 ಕ್ಕೆ ವಿಷ್ಣುಮಂಗಲ ದೇವಸ್ಥಾನಕ್ಕೆ ಶೋಭಾಯಾತ್ರೆ, ಚಕ್ರ ತೀರ್ಥದಲ್ಲಿ ಅವಭೃತ ಸ್ನಾನ, ಸಂಜೆ 6 ರಿಂದ ಭಜನೆ, 8 ಕ್ಕೆ ಸಂಗೀತಾರ್ಚನೆ ಭಾರತೀ ಪ್ರಕಾಶ್ ಪಟೇರಿ ಕಾವುಮಠ ಅವರಿಂದ, ರಾತ್ರಿ 9ಕ್ಕೆ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, 26 ರಂದು ವಿಷ್ಣುಮೂರ್ತಿ ದೈವದ ಆರಾಧನೆ, ಒತ್ತೆಕೋಲ, ಕೊಳ್ಳಿ ಕಡಿಯುವ ಮುಹೂರ್ತ ನಡೆಯಲಿದೆ.