ಬದಿಯಡ್ಕ: ಇತಿಹಾಸ ಪ್ರಸಿದ್ಧವಾದ ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದ ಈ ವರ್ಷದ ಜಾತ್ರಾ ಮಹೋತ್ಸವವು ಪರಮಪೂಜ್ಯ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ನೇತೃತ್ವದಲ್ಲಿ ಗುರುವಾರ(ಫೆ.13 ರಂದು) ಆರಂಭಗೊಂಡಿತು. ಜಾತ್ರಾ ಮಹೋತ್ಸವ ಫೆ.17 ರ ವರೆಗೆ ವಿವಿಧ ವೈದಿಕ, ತಾಂತ್ರಿಕ, ಧಾರ್ಮಿಕ ಹಾಗು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಗುರುವಾರ ಬೆಳಗ್ಗೆ ಧ್ವಜಾರೋಹಣ, ಹಸಿರುವಾಣಿ ಮೆರವಣಿಗೆ ನಡೆಯಿತು. ಫೆ.14 ರಂದು ಬೆಳಗ್ಗೆ ಶ್ರೀ ಭೂತಬಲಿ, ಸಂಜೆ ದೀಪೆÇೀತ್ಸವ ಹಾಗು ಕಲಾದೀಪ - ಯುಗಳ ಭರತನಾಟ್ಯ, ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿ ಕಲಾ ಪುತ್ತೂರು ಇವರಿಂದ ನಡೆಯಲಿದೆ.
ಫೆ.15 ರಂದು ಬೆಳಗ್ಗೆ ಶ್ರೀ ಭೂತಬಲಿ, ಸಂಜೆ ನಡುದೀಪೆÇೀತ್ಸವ ಹಾಗು ಪುಷ್ಪ ರಥೋತ್ಸವ ಜರಗಲಿದ್ದು, ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರಿಂದ `ದೇವಭಾವ ಸಂಗೀತ' ಜರಗಲಿದೆ. ಫೆ.16 ರಂದು ಬೆಳಗ್ಗೆ ಶ್ರೀ ಭೂತಬಲಿ, ರಾತ್ರಿ ಬೆಡಿ ಉತ್ಸವ, ಪುಷ್ಪ ರಥೋತ್ಸವ ಜರಗಲಿದ್ದು, ಶ್ರೀ ರಾಜರಾಜೇಶ್ವರಿ ಭರತನಾಟ್ಯ ಕಲಾ ಮಂಡಳಿ ಮುಂಬೈ ಅವರಿಂದ ಭರತನಾಟ್ಯ ಜರಗಲಿದೆ.
ಫೆ.17 ರಂದು ಬೆಳಗ್ಗೆ ಶಯನೋದ್ಘಾಟನೆ, ಮಂಗಳಾಭಿಷೇಕ, ರಾತ್ರಿ ನೃತ್ಯೋತ್ಸವ, ತೆಪೆÇ್ಪೀತ್ಸವ, ಅವಭೃತ ಸ್ನಾನ, ಧ್ವಜಾವರೋಹಣ, ಪ್ರಸಾದ ವಿತರಣೆ ಕಾರ್ಯಕ್ರಮ ಜರಗಲಿದ್ದು, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಎಸ್.ಎಸ್.ಆರ್ಕೆಸ್ಟ್ರಾ ಪಯ್ಯನ್ನೂರು ಸಾದರಪಡಿಸುವ `ಪ್ಲವರ್ಸ್ ಚಾನೆಲ್ ಕಾಮಿಡಿ' ಉತ್ಸವ ಜರಗಲಿದೆ.