ಮುಳ್ಳೇರಿಯ: ಇತ್ತೀಚೆಗೆ ಕಾಡಾನೆ ಧಾಳಿಗೊಳಗಾಗಿ ಅಪಾರ ನಾಶನಷ್ಟ ಉಂಟಾದ ಪ್ರದೇಶಗಳಾದ ಆಲಂತ್ತಡ್ಕ, ಕಯಂಪಾಡಿ, ಬಳಕ್ಕ, ಅಡ್ಕತ್ತೊಟ್ಟಿ, ಕಡುಮನೆ ಮೊದಲಾದ ಪ್ರದೇಶಗಳಿಗೆ ಕರ್ಷಕ ಮೋರ್ಚಾದ ಜಿಲ್ಲಾ ಪ್ರತಿನಿಧಿಗಳು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಡಾನೆ ಧಾಳಿಯಿಂದ ಅಪಾರ ಪ್ರಮಾಣದಲ್ಲಿ ಕೃಷಿಕರು ಬೆಳೆ ಹಾನಿಗೊಳಗಾಗಿದ್ದಾರೆ. ಜೊತೆಗೆ ಜನಸಾಮಾನ್ಯರು ಮನೆಯಿಂದ ಹೊರಬರಲು ಭೀತಿಗೊಳಗಾಗಿದ್ದಾರೆ. ವಿದ್ಯಾರ್ಥಿಗಳು, ಸ್ತ್ರೀಯರು, ಕೂಲಿ ಕಾರ್ಮಿಕರು ಹೊರಗಿಳಿಯಲು ಅಸಾಧ್ಯವಾಗಿ ಭಯಬೀಥಯಿಂದ ಬದುಕು ಸವೆಸುವ ದುರವಸ್ಥೆಗೊಳಗಾಗಿದ್ದರೂ ಅರಣ್ಯಾಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂಧಿಸದಿರುವುದು ಖೇದಕರ ಎಂದು ಕರ್ಶಕ ಮೋರ್ಚಾ ಪ್ರತಿನಿಧಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ಷಕ ಮೋರ್ಚಾದ ಜಿಲ್ಲಾಧ್ಯಕ್ಷ ಕೃಷ್ಣನ್, ಜಿಲ್ಲಾ ಉಪಾಧ್ಯಕ್ಷ ಬೇಬಿ ಪ್ರಾನ್ಸಿಸ್, ಮುಖಂಡ ರಾಧಾಕೃಷ್ಣ ಕೆದಿಲಾಯ, ಶಿವಕೃಷ್ಣ ಭಟ್, ಮೊದಲಾದವರು ಸಂದರ್ಶನ ನಡೆಸಿದ ತಂಡದಲ್ಲಿದ್ದರು.