ಉಪ್ಪಳ: ಪೈವಳಿಕೆ ಪಂಚಾಯತಿಯ ಮಾಣಿಪ್ಪಾಡಿ ನಾರಾಯಣ ಅವರ ಪತ್ನಿ ಸೀತಾ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ಅವರಿಗೆ ಕುಲಾಲ ಸುಧಾರಕ ಸಂಘ ಪೈವಳಿಕೆ ಶಾಖೆಯು 10000 ರೂಪಾಯಿ ಸಹಾಯಧನ ನೀಡಿತು.
ಸಂಘದ ಅಧ್ಯಕ್ಷರಾದ ಪೂವಪ್ಪ ಮುನ್ನಿಪ್ಪಾಡಿ, ಕೆ.ಎಂ.ಎಸ್.ನ ರಾಜ್ಯಸಮಿತಿ ಸದಸ್ಯರಾದ ಜಯಂತ ಮಾಸ್ತರ್ ಮೀಯಪದವು, ಕಾರ್ಯದರ್ಶಿಯರಾದ ಸುಬ್ರಾಯ ಸಾಯ, ಅಶೋಕ್ ಕೋರಿಕ್ಕಾರ್, ಸಂಚಾಲಕರಾದ ನಾಗೇಶ್ ಕೊಡಂದೂರ್, ಶ್ರೀಧರ್ ಬದಿಯಾರ್, ಉಪಾಧ್ಯಕ್ಷರಾದ ಬಾಬು ಮೂಲ್ಯ ವಾದ್ಯಪಡ್ಪು, ಪದಾಧಿಕಾರಿಗಳಾದ ಜಯಂತ ಚಿಪ್ಪಾರು, ಉದಯ ಮುನ್ನೂರು, ಪರಮೇಶ್ವರ ಪಾವಲ್ಕೋಡಿ ಉಪಸ್ಥಿತರಿದ್ದರು.