ನವದೆಹಲಿ: ಭಾರತ-ಪಾಕಿಸ್ತಾನ ಎರಡೂ ರಾಷ್ಟ್ರಗಳು ಸಮ್ಮತಿಸಿದರೆ ಕಾಶ್ಮೀರ ವಿಚಾರವಾಗಿ ಮಧ್ಯಸ್ಥಿಕೆ ವಹಿಸಲು ನಾನು ಸಿದ್ದನಿದ್ದೇನೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಭಾರತ ಪ್ರವಾಸದಲ್ಲಿರುವ ಟ್ರಂಪ್ ನಿನ್ನೆ ದೆಹಲಿಯಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಮಾತುಗಳನ್ನಾಡಿದ್ದಾರೆ.
"ನಾನು ಮತ್ತು ಪ್ರಧಾನಿ ಮೋದಿ ಭಯೋತ್ಪಾದನೆ ಬಗ್ಗೆ ಚರ್ಚಿಸಿದ್ದು ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ನಾನು ಸಿದ್ದವಿದ್ದೇನೆ". "ಪಿಎಂ ಮೋದಿ ಭಯೋತ್ಪಾದನೆ ವಿರುದ್ಧ ಬಲವಾದ ಹೋರಾಟ ನಡೆಸುತ್ತಿದ್ದಾರೆ.ಅವರು ತುಂಬಾ ಧಾರ್ಮಿಕ ಮನುಷ್ಯ ಹಾಗೂ ಶಾಂತ ಸ್ವಭಾವದ ವ್ಯಕ್ತಿ. ಆದರೆ ತುಂಬಾ ಬಲಶಾಲಿ ಮತ್ತು ಅವರು ದೇಶದ ರಕ್ಷಣೆ ವಿಚಾರವನ್ನು ಬಲವಾಗಿ ಬೆಂಬಲಿಸುತ್ತಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ನನಗೆ ಉತ್ತಮಸಂಬಂಧವಿದೆ. ಅವರು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಯಂತ್ರಿಸಲು ಕೆಲಸ ಮಾಡುತ್ತಿದ್ದಾರೆ ಇಬ್ಬರು ನಾಯಕರು(ಪಿಎಂ ಮೋದಿ ಮತ್ತು ಪಾಕ್ ಪಿಎಂ ಖಾನ್)ಅವರೊಂದಿಗಿನ ನನ್ನ ಸಂಬಂಧವು ತುಂಬಾ ಉತ್ತಮವಾಗಿದೆ. ಅವರು (ಪಾಕಿಸ್ತಾನ) ಕಾಶ್ಮೀರಕ್ಕಾಗಿ ಕೇಳುತ್ತಾರೆ.. ಕಾಶ್ಮೀರವು ದೀರ್ಘಕಾಲದ ಸಮಸ್ಯೆಯಾಗಿದ್ದು ಇದನ್ನು ಬಗೆಹರಿಸಲು ನಾನು ಮಧ್ಯಸ್ಥಗಾರನಾಗಲು ಸಿದ್ದ" ಟ್ರಂಪ್ ಹೇಳಿದ್ದಾರೆ.
ಧಾರ್ಮಿಕ ಸ್ವಾತಂತ್ರ್ಯ: ನಾವು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದೇವೆ ಎಂದ ಟ್ರಂಪ್ ಪ್ರಧಾನಿ ಮೋದಿ ಅವರು ಧಾರ್ಮಿಕ ಸ್ವಾತಂತ್ರ್ಯವನ್ನು ನಂಬುತ್ತಾರೆ. ಧಾರ್ಮಿಕ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲು ಭಾರತ ಶ್ರಮಿಸುತ್ತಿದೆ.ಧಾರ್ಮಿಕ ವಿಚಾರವಾಗಿ ನಡೆಯುವ ದಾಳಿಗಳು ಭಾರತದ ವೈಯುಕ್ತಿಕ ವಿಚಾರವಾಗಿದೆ ಎಂದು ಅವರು ಹೇಳಿದ್ದಾರೆ.
ಸಿಎಎ: ಪೌರತ್ವ ತಿದ್ದುಪಡಿ ಮಸೂದೆ ಕುರಿತು ನಾನು ಚರ್ಚಿಸಲು ಬಯಸುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. "ಪೌರತ್ವ ತಿದ್ದುಪಡಿ ಮಸೂದೆಯನ್ನು ಚರ್ಚಿಸಲು ನಾನು ಬಯಸುವುದಿಲ್ಲ. ನಾನು ಅದನ್ನು ಭಾರತಕ್ಕೆ ಬಿಡುತ್ತೇನೆ.ಪ್ರಧಾನಿ ಮೋದಿ ಹಾಗೂ ಅವರ ಸರ್ಕಾರ ತಮ್ಮ ಜನರಿಗಾಗಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಆಶಿಸುತ್ತೇವೆ"
ತಾಲಿಬಾನ್ ಶಾಂತಿ ಒಪ್ಪಂದ: ನಾವು ತಾಲಿಬಾನ್ ಜೊತೆ ಶಾಂತಿ ಒಪ್ಪಂದಕ್ಕೆ ಕೆಲಸ ಮಾಡುತ್ತಿದ್ದೇವೆ ಎಂದ ಟ್ರಂಪ್ "ಈ ಶಾಂತಿ ಒಪ್ಪಂದ ಆಗುವುದನ್ನು ಭಾರತವೂ ನೋಡಬಯಸಿದೆ. ನನ್ನ ಬಗೆಗೆ ವಿರೋಧವಿರುವ . 99.9% ಜನರು ಕೂಡ ಈ ಶಾಂತಿ ಒಪ್ಪಂದದ ಕುರಿತು ನನ್ನ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ" ಅಮೆರಿಕಾ ಅಧ್ಯಕ್ಷರು ಹೇಳೀದರು.