ಗುವಾಹಟಿ: ಮಿಜೋರಾಂನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತೆ ಕ್ಯಾರೋಲಿನ್ ಮಲ್ಸಾಮ್ಟ್ಲುವಾಂಗಿ ಕೇವಲ ಧೈರ್ಯಶಾಲಿ ಮಾತ್ರವಲ್ಲ, ಉದಾರವಾದಿಯೂ ಆಗಿದ್ದಾರೆ
11 ವರ್ಷದ ಈ ವಿದ್ಯಾರ್ಥಿನಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯಿಂದ ಬಂದಂತಹ ಹಣದಲ್ಲಿ ಶೇ 50 ಅಂದರೆ 10 ಸಾವಿರ ರೂ.ನ್ನು ತಾನು ಅಪಹರಣಕಾರರಿಂದ ರಕ್ಷಿಸಿದ ಬಾಲಕಿಗೆ ನೀಡುವ ಮೂಲಕ ಉದಾರತೆ ಮೆರಿದಿದ್ದಾಳೆ.ಅಲ್ಲದೇ, ದೆಹಲಿಯಿಂದ ಬಟ್ಟೆ ಹಾಗೂ ಬೆಳ್ಳಿ ನೆಕ್ಲೇಸ್ ತಂದು ಕೊಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾಳೆ. ಕಳೆದ ವಾರ ಬಾಲಕಿ ಮನೆಗೆ ಭೇಟಿ ನೀಡಿದ ಕ್ಯಾರೋಲಿನ್ ಅದ್ದೂರಿ ಸ್ವಾಗತ ನೀಡಲಾಗಿದೆ. ಬಾಲಕಿಯ ಕುಟುಂಬದವರು ಬಡವರು ಎಂಬುದು ತಿಳಿದ ನಂತರ ಪ್ರಶಸ್ತಿಯಲ್ಲಿ ಬಂದಂತಹ ಸ್ವಲ್ಪ ಹಣವನ್ನು ನೀಡಿರುವುದಾಗಿ ಕ್ಯಾರೋನಿನ್ ತಾಯಿ ತಿಳಿಸಿದರು. ಕಳೆದ ವರ್ಷ ಜೂನ್ ತಿಂಗಳಲ್ಲಿ ಕ್ಯಾರೋಲಿನ್ ತನ್ನ ಸ್ನೇಹಿತರೊಂದಿಗೆ ಮನೆಯ ಹಿಂಭಾಗ ಆಟವಾಡುತ್ತಿದ್ದಾಗ, ಅಪರಿಚಿತ ಬಾಲಕಿಯೊಂದು ಅವರ ಗುಂಪು ಸೇರಿತ್ತು. ಆದರೆ, ಹೆಚ್ಚಿನ ಗಮನ ಹರಿಸಿರಲಿಲ್ಲ. ಮಾರನೇ ದಿನ ಪೆÇಲೀಸರು ಬಂದು ನಾಪತ್ತೆಯಾಗಿರುವ ಬಾಲಕಿಗಾಗಿ ಶೋಧ ಕಾರ್ಯ ನಡೆಸಿ, ಈ ಬಾಲಕಿ ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಹೇಳಿ ಹೊರಟು ಹೋಗಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಕ್ಯಾರೋಲಿನ್ ನೇತೃತ್ವದ ತಂಡ ಬಾಲಕಿಯನ್ನು ಪತ್ತೆ ಹಚ್ಚಿತ್ತು. ಆದರೆ, ಅಪಹರಣಕಾರರು ಆಕೆಯಿಂದ ಬಾಲಕಿಯನ್ನು ಪಡೆಯಲು ಯತ್ನಿಸಿದಾಗ ಬಾಲಕಿಯನ್ನು ಬೆನ್ನಿಗೆ ಕಟ್ಟಿಕೊಂಡು ಓಡಿ ಹೋಗುವ ಮೂಲಕ ಆ ಬಾಲಕಿಯನ್ನು ರಕ್ಷಿಸಲಾಗಿತ್ತು.
ಅಪಹರಣಕಾರರು ಕಲ್ಲಿನಿಂದ ಹೊಡೆದರೂ ಬಾಲಕಿಯನ್ನು ಮನೆಯವರೆಗೂ ಎತ್ತುಕೊಂಡು ಹೋಗಿದ್ದ ಕ್ಯಾರೋಲಿನ್ ನಂತರ ಎಲ್ಲಾ ಮಾಹಿತಿಯನ್ನು ಆಕೆಯ ಪೆÇೀಷಕರಿಗೆ ವಿವರಿಸಲಾಗಿತ್ತು.