ಕಾಸರಗೋಡು: ನೂತನ ತಾಂತ್ರಿಕ ರಚನೆಗಳಿಂದ ಕೂಡಿದ ರೊಬೋಟಿಕ್ಸ್, ಹೋಮ್ ಅಟೋಮೇಶನ್, ತ್ರೀಡಿ ಕ್ಯಾರೆಕ್ಟರ್ ಮೋಡೆಲಿಂಗ್ ಮುಂತಾದುವುದಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಲಿಟ್ಲ್ ಕೈಟ್ಸ್ ಜಿಲ್ಲಾ ಸಹವಾಸ ಶಿಬಿರ ಚೆರ್ಕಳದ ಮಾರ್ತೋಮಾ ಶಾಲೆಯಲ್ಲಿ ಜರುಗಿತು.
ಎರಡು ದಿವಸಗಳ ಕಾಲ ನಡೆದ ಶಿಬಿರವನ್ನು ಕೇರಳ ಇನ್‍ಫ್ರಾಸ್ಟ್ರಕ್ಚರ್ ಏಂಡ್ ಟೆಕ್ನಾಲಜಿ ಫಾರ್ ಎಜ್ಯುಕೇಶನ್ ನೇತೃತ್ವದಲ್ಲಿ ನಡೆಸಲಾಯಿತು. ಕಳೆದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನಡೆದ ಉಪಜಿಲ್ಲಾ ಶಿಬಿರಗಳಲ್ಲಿ ಪಾಲ್ಗೊಂಡ 793ಮಂದಿಯಲ್ಲಿ ಆಯ್ದ 90ಮಂದಿಯನ್ನು ಆಯ್ಕೆ ಮಾಡಿ ತರಬೇತಿ ನೀಡಲಾಯಿತು. ಲಿಟ್ಲ್ ಕೈಟ್ ಸಿ.ಇ.ಓ ಅನ್ವರ್ ಸಾದತ್ ವಿಡಿಯೋ ಕಾನ್‍ಫರೆನ್ಸ್ ಮೂಲಕ ಶಿಬಿರ ಉದ್ಘಾಟಿಸಿದರು.
ಎರಡು ದಿವಸಗಳ ಕಾಲ ನಡೆದ ಶಿಬಿರದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಉಪಕರಣಗಳನ್ನು ಮಾರ್ತೋಮಾ ಶಾಲೆಯಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೈಟ್ ಜಿಲ್ಲಾ ಕೋರ್ಡಿನೇಟರ್ ಎಂ.ಪಿ ರಾಜೇಶ್ ತಿಳಿಸಿದ್ದಾರೆ.