ಬದಿಯಡ್ಕ: ಜಮುನಾ ಜನಸೇವಾ ಸಮಿತಿಯ ಕುಮಾರಸ್ವಾಮಿ ಸ್ವಸಹಾಯ ಸಂಘಗಳ ಒಕ್ಕೂಟ ನೀರ್ಚಾಲು-ಏಣಿಯರ್ಪು ಇದರ ನೇತೃತ್ವದಲ್ಲಿ ಪುದುಕೋಳಿಯಲ್ಲಿರುವ ಆದಿಶಕ್ತಿ ಸ್ವಸಹಾಯ ಸಂಘದ ದ್ವಿತೀಯ ವಾರ್ಷಿಕೋತ್ಸವ ಪುದುಕೋಳಿ ಬಾಲಕೃಷ್ಣ ನಾಯ್ಕ್ ಅವರ ಮನೆಯಲ್ಲಿ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.
ಸಂಘದ ಹಿರಿಯ ಸದಸ್ಯ ಸುಬ್ಬ ನಾಯ್ಕ ಪಿ. ದೀಪ ಬೆಳಗಿಸಿ ಉದ್ಘಾಟಿಸಿದರು. ಜನಸೇವಾ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಕಡಂಬಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಒಕ್ಕೂಟದ ಅಧ್ಯಕ್ಷ ಹರೀಶ ಏಣಿಯರ್ಪು, ಕಾರ್ಯದರ್ಶಿ ಶಶಿಧರ ಏಣಿಯರ್ಪು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಗಂಗಾಧರ ಕೆ.ಪಿ. ಬಾಯಿಕಟ್ಟೆ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ಗಂಗಾಧರ ಕೆ.ಸ್ವಾಗತಿಸಿ, ಮುರಳೀಕೃಷ್ಣ ಪಿ. ವಂದಿಸಿದರು. ಕಿರಣ್ ಪಿ. ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭ ಸ್ವಸಹಾಯ ಸಂಘದ 2020-21ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಅಧ್ಯಕ್ಷರಾಗಿ ಗಂಗಾಧರ ಕೆ.ಪಿ.ಬಾಯಿಕಟ್ಟೆ, ಉಪಾಧ್ಯಕ್ಷರಾಗಿ ವಾಮನ ನಾಯ್ಕ್ ಪುದುಕೋಳಿ, ಕಾರ್ಯದರ್ಶಿಯಾಗಿ ರೋಶನ್ ಪಿ., ಜೊತೆಕಾರ್ಯದರ್ಶಿಯಾಗಿ ನಾಗರಾಜ ಪಿ., ಖಜಾಂಜಿಯಾಗಿ ಸುಬ್ಬ ನಾಯ್ಕ ಪಿ. ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಪುದುಕೋಳಿಯ ತತ್ವಮಸಿ ಬಾಲಗೋಕುಲದ ಶಿಕ್ಷಾರ್ಥಿಗಳು ಪ್ರಾರ್ಥನೆ ಹಾಡಿದರು. ಶಾಂತಿಮಂತ್ರದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಂಡಿತು.