ಲಂಡನ್: ಐರೋಪ್ಯ ಒಕ್ಕೂಟದ ಸುಮಾರು ಅರ್ಧ ದಶಕಗಳ ಸದಸ್ಯತ್ವದಿಂದ ಬ್ರಿಟನ್ ಹೊರಬಂದಿದೆ. ತನ್ನ ಅನಿಶ್ಚಿತತೆಯ ಹಾದಿ ಮಧ್ಯೆ ಕಹಿ ವಾದ ವಿವಾದಗಳನ್ನು ಮಾಡಿಕೊಂಡಿದ್ದ ಬ್ರಿಟನ್ ಕೊನೆಗೂ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ.
ಬ್ರಿಟನ್ ನ ಈ ನಿರ್ಧಾರಕ್ಕೆ ದೇಶದ ನಾಗರಿಕರಲ್ಲಿ ಸಂಭ್ರಮ ಮತ್ತು ಕಣ್ಣೀರು ಕಂಡುಬಂತು. ಎರಡನೇ ವಿಶ್ವಯುದ್ಧ ನಂತರ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಮಧ್ಯೆ ಒಗ್ಗಟ್ಟು ಪ್ರದರ್ಶಿಸಲು ರಚನೆಯಾಗಿದ್ದ ಐರೋಪ್ಯ ಒಕ್ಕೂಟದಿಂದ ಹೊರಬರಲು ಬ್ರಿಟನ್ ಪ್ರಯತ್ನಿಸುತ್ತಲೇ ಬಂದಿತ್ತು. ಈ ಮೂಲಕ ಬ್ರಿಟನ್ ಐರೋಪ್ಯ ಒಕ್ಕೂಟದ 47 ವರ್ಷಗಳ ಸದಸ್ಯತ್ವವನ್ನು ಕೊನೆಗೊಳಿಸಿದೆ. ಬ್ರಿಟನ್ ನನ ಒಟ್ಟು ಪ್ರಜೆಗಳ ಅರ್ಧಕ್ಕೂ ಹೆಚ್ಚು ಸದಸ್ಯರು ಮೂರೂವರೆ ವರ್ಷಗಳ ಹಿಂದೆ ಬ್ರೆಕ್ಸಿಟ್ ಪರವಾಗಿ ಮತ ಚಲಾಯಿಸಿದ್ದರು.ಐರೊ?ಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬರುವ ಪ್ರಕ್ರಿಯೆಯಾದ ಬ್ರೆಕ್ಸಿಟ್ ಗೆ ಐರೊ?ಪ್ಯ ಸಂಸತ್ ಅಂತಿಮ ಒಪ್ಪಿಗೆ ನೀಡುವ ಮೂಲಕ ಐದು ದಶಕದ ಐರೊ?ಪ್ಯ ಒಕ್ಕೂಟದ ಒಡನಾಟವನ್ನು ಬ್ರಿಟನ್ ಶುಕ್ರವಾರ ಅಧಿಕೃತವಾಗಿ ಕಡಿದುಕೊಂಡಿದೆ. ಇದರಿಂದ 28 ದೇಶಗಳ ಪ್ರಬಲ ಒಕ್ಕೂಟದಿಂದ ಬ್ರಿಟನ್ ದೂರವಾಗಲಿದ್ದು, ಒಕ್ಕೂಟಕ್ಕೆ ದೊಡ್ಡ ಹಿನ್ನಡೆ ಆಗಲಿದೆ.
ಬ್ರೆಕ್ಸಿಟ್ ನಿಲುವಳಿ ಮೆ?ಲೆ ಬುಧವಾರ ನಡೆದ ಚರ್ಚೆಯಲ್ಲಿ ಐರೊ?ಪ್ಯ ಸಂಸತ್?ನ ಅನೇಕ ಸದಸ್ಯರು ಭಾವನಾತ್ಮಕ ಭಾಷಣ ಮಾಡಿದ್ದರು. ಕೊನೆಯಲ್ಲಿ ನಡೆದ ಮತದಾನದಲ್ಲಿ ಬ್ರಿಕ್ಸಿಟ್ ಪರ 621 ಮತ್ತು ವಿರುದ್ಧ 49 ಮತ ಚಲಾವಣೆಯಾದವು. 13 ಸದಸ್ಯರು ತಟಸ್ಥರಾದರು. ಸ್ಕಾಟ್ಲೆಂಡ್?ನ ಸಾಂಪ್ರದಾಯಿಕ ವಿದಾಯ ಗೀತೆ ‘ಆಲ್ಡ್ ಲ್ಯಾಂಗ್ ಸೈನ್’ ಅನ್ನು ನುಡಿಸುವ ಮೂಲಕ ಬ್ರಿಟನ್?ಗೆ ಬೀಳ್ಕೊಡುಗೆ ನೀಡಲಾಯಿತು. ಐರೊ?ಪ್ಯ ಸಂಸತ್?ನಲ್ಲಿ ಅಯು ರಿವೊಯಿಲ್ ಪಕ್ಷದ ನೇತೃತ್ವದಲ್ಲಿ ಬ್ರಿಟನ್?ನ 73 ಸಂಸದರು ಇದ್ದು, ಹಲವರು ಬೇಸರದಿಂದ ಕಣ್ಣೀರು ಹಾಕಿದರು.