ಬೆಂಗಳೂರು: ಕನ್ನಡದಲ್ಲಿ ಹಲವಾರು ಮೆಲೋಡಿ ಸಾಂಗ್ ಗಳನ್ನು ಹಾಡಿರುವ ಬಾಲಿವುಡ್ ನ ಸ್ಟಾರ್ ಗಾಯಕ ಸೋನು ನಿಗಮ್ ಅವರು ನಾನು ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಅನಿಸುತ್ತಿದೆ ಎಂದು ಹೇಳಿದ್ದಾರೆ.
12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟಣಾ ಸಮಾರಂಭಕ್ಕೆ ಅತಿಥಿಯಾಗಿ ಬಂದಿದ್ದರು. ಈ ಸಂದರ್ಭ ಕನ್ನಡ ಹಾಡೊಂದನ್ನು ಹಾಡಿ ನಂತರ ಮಾತನಾಡಿದ ಅವರು ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ ಅನ್ನೋ ಬಲವಾದ ನಂಬಿಕೆ ನನ್ನಲಿದೆ. ಅದಕ್ಕೆ ನನಗೆ ಕನ್ನಡ ಅಂದರೆ ತುಂಬಾ ಪ್ರೀತಿ, ಗೌರವ ಎಂದು ಹೇಳಿದರು.
ವಿದೇಶಗಳಿಗೆ ಕಾರ್ಯಕ್ರಮ ಕೊಡಲು ಹೋದಾಗ ಅಲ್ಲಿ ಯಾರಾದರೂ ಕನ್ನಡ ಎಂದು ಕೂಗಿದರೆ ಸಾಕು ಕನ್ನಡದ ಹಾಡು ಹಾಡುವ ಆಸೆಯಾಗುತ್ತದೆ ಎಂದು ಕನ್ನಡದ ಬಗ್ಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಮುಂಗಾರು ಮಳೆ ಚಿತ್ರದ ಅನಿಸುತಿದೆ ಏಕೋ ಇಂದು ಹಾಡನ್ನು ಹಾಡಿ ಸೋನು ನಿಗಮ್ ಎಲ್ಲರನ್ನೂ ರಂಜಿಸಿದರು.