ಕಾಸರಗೋಡು: ಸ್ವಾತಂತ್ರ್ಯೋತ್ತರ ಕನ್ನಡ ನಾಡಿನ ಸಂಸ್ಕøತಿಯ ಮುಖ್ಯ ಧ್ವನಿಯಾಗಿರುವ ಹಿರಿಯ ಸಾಹಿತಿ, ಸಂಶೋಧಕ ಹಾಗು ಚಿಂತಕರೂ ಆದ ನಾಡೋಜ ಡಾ.ಹಂಪನಾ ದಂಪತಿಗಳು ದಶಕಗಳ ಬಳಿಕ ಇಂದು ಕಾಸರಗೋಡಿಗೆ ಆಗಮಿಸಲಿದ್ದಾರೆ.
ಕನ್ನಡ ಸಾರಸ್ವತ ಲೋಕದಲ್ಲಿ ಹಂಪನಾ ದಂಪತಿಗಳು ಎಂದೇ ಚಿರಪರಿಚಿತರಾಗಿರುವ ಹಂಪ ನಾಗರಾಜಯ್ಯ ಹಾಗು ಡಾ|ಕಮಲಾ ಹಂಪನಾ ಜೊತೆಯಾಗಿ ಕಾಸರಗೋಡಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲ ಸಲವಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಪ್ರಾಯೋಜಕತ್ವದಲ್ಲಿ ಅಪೂರ್ವ ಕಲಾವಿದರು ಕಾಸರಗೋಡು ನೇತೃತ್ವದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗ ಚಾಲ, ಕಾಸರಗೋಡು ಇದರ ಸಹಯೋಗದಲ್ಲಿ ಕನ್ನಡ ಚಿಂತನೆ ತಿಂಗಳ ಕಾರ್ಯಕ್ರಮ ಹಾಗು ನಾಡೋಜ ಡಾ.ಹಂಪನಾ ಮತ್ತು ನಾಡೋಜ ಡಾ|ಕಮಲಾ ಹಂಪನಾ ಸಾಹಿತ್ಯ ವಿಚಾರ ಸಂಕಿರಣ ಇಂದು ಬೆಳಗ್ಗೆ 9.30 ರಿಂದ ಕಣ್ಣೂರು ವಿಶ್ವವಿದ್ಯಾನಿಲಯ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗ ಚಾಲದಲ್ಲಿ ನಡುಯಲಿದ್ದು, ಈ ಕಾರ್ಯಕ್ರಮದಲ್ಲಿ ನಾಡೋಜ ಡಾ.ಹಂಪನಾ ದಂಪತಿಗಳು ಉಪಸ್ಥಿತರಿದ್ದು ಗಡಿನಾಡು ಕಾಸರಗೋಡಿನಲ್ಲಿ ಅಭಿನಂದನೆಯ ಗೌರವವನ್ನೂ ಸ್ವೀಕರಿಸಲಿದ್ದಾರೆ.
ಕಣ್ಣೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಎಂ.ಸಿ.ರಾಜು ಕಾರ್ಯಕ್ರಮವನ್ನು ಉದ್ಘಾಟಿಸುವರು. ಮೈಸೂರು ವಿಶ್ವವಿದ್ಯಾನಿಲಯ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕರು ಹಾಗು ನಿರ್ದೇಶಕರಾದ ಪೆÇ್ರ|ಎನ್.ಎಂ.ತಳವಾರ್ ಅಧ್ಯಕ್ಷತೆ ವಹಿಸುವರು. ಅಪೂರ್ವ ಕಲಾವಿದರು ಕಾಸರಗೋಡು ಸಂಸ್ಥೆಯ ಅಧ್ಯಕ್ಷ ಉಮೇಶ್ ಸಾಲಿಯಾನ್ ಪ್ರಾಸ್ತಾವಿಕವಾಗಿ ಮಾತನಾಡುವರು.
ಡಾ.ಹಂಪನಾ ಮತ್ತು ಡಾ.ಕಮಲಾ ಹಂಪನಾ ಸಾಹಿತ್ಯ ಮತ್ತು ಸಂಶೋಧನೆಯ ಬಗೆಗೆ ನಡೆಯುವ ವಿಚಾರಗೋಷ್ಠಿಯಲ್ಲಿ ಬೇಕೂರು ಸರ್ಕಾರಿ ಹಿರಿಯ ಪ್ರೌಢ ಶಾಲೆಯ ಅಧ್ಯಾಪಕಿ ಸೌಮ್ಯಾ ಪ್ರಸಾದ್, ಕಣ್ಣೂರು ವಿಶ್ವವಿದ್ಯಾನಿಲಯ ಭಾರತೀಯ ಭಾಷಾ ಅಧ್ಯಯನಾಂಗ ಚಾಲ ಇಲ್ಲಿನ ಕನ್ನಡ ವಿಭಾಗದ ನಿರ್ದೇಶಕರಾದ ಡಾ.ರಾಜೇಶ್ ಬೆಜ್ಜಂಗಳ, ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಂಶೋಧಕ ಪೆÇ್ರ.ಸಿ.ನಾಗಣ್ಣ ಮೈಸೂರು, ವಿಶ್ರಾಂತ ಪ್ರಾಧ್ಯಾಪಕ ಹಾಗು ಹಿರಿಯ ವಿದ್ವಾಂಸ ಪೆÇ್ರ.ಎನ್.ಎಸ್.ತಾರಾನಾಥ ಮೈಸೂರು ಉಪನ್ಯಾಸ ನೀಡುವರು.
ಬಳಿಕ ನಡೆಯುವ ನಾಡೋಜ ಸಾಹಿತ್ಯ ದಂಪತಿಗಳಿಗೆ ಸಮ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಯ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿ ಅಭಿನಂದನ ಭಾಷಣ ಮಾಡುವರು. ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಸರ್ಕಾರಿ ಕಾಲೇಜು ಕಾಸರಗೋಡು ಇಲ್ಲಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್, ನ್ಯೂಸ್ 18 ಬೆಂಗಳೂರು ಇದರ ಲೇಖಕ ಹಾಗು ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಶುಭನುಡಿಯುವರು. ಯಕ್ಷಗಾನ ಸಂಶೋಧನ ಕೇಂದ್ರ ಸರ್ಕಾರಿ ಕಾಲೇಜು ಕಾಸರಗೋಡು ಇದರ ಸಂಯೋಜನಾಧಿಕಾರಿ ಹಾಗು ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರ್ವಹಿಸುವರು. ಡಾ.ಹಂ.ಪ.ನಾಗರಾಜಯ್ಯ, ಡಾ.ಕಮಲಾ ಹಂ.ಪ.ನಾಗರಾಜಯ್ಯ, ಶ್ರದ್ಧಾ ಭಟ್ ನಾಯರ್ಪಳ್ಳ, ಸುಜಾತಾ ಸಿ.ಎಚ್. ಉಪಸ್ಥಿತರಿರುವರು.