ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯತಿ ಮಲ್ಲ ವಾರ್ಡ್‍ನಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಆರಂಭಗೊಂಡಿತು.
ವಿವಿಧ ಸಂಘ ಸಂಸ್ಥೆಗಳು, ಕುಟುಂಬಶ್ರೀ, ಎನ್.ಆರ್.ಇ.ಜಿ. ಕಾರ್ಯಕರ್ತರ ನೇತೃತ್ವದಲ್ಲಿ ಮಾ.31 ರ ವರೆಗೆ ಪ್ಲಾಸ್ಟಿಕ್ ಸೃಷ್ಟಿಸುವ ಆರೋಗ್ಯ, ಪರಿಸರ ಸಮಸ್ಯೆಗಳು ಮತ್ತು ಜೈವಿಕ ಪದ್ಧತಿಯತ್ತ ವಾಪಸಾಗುವ ಅಗತ್ಯತೆ ಕುರಿತಾಗಿ ತಿಳಿವಳಿಕೆ, ಜಾಗೃತಿ ಮೂಡಿಸಲಾಗುವುದು. ಕಳೆದ ಮೂರು ವರ್ಷಗಳಿಂದ ವಾರ್ಡ್‍ನಲ್ಲಿ ನೀರಿನ ಸಂರಕ್ಷಣೆ ಅಭಿಯಾನ ನಡೆಸಲಾಗಿತ್ತು.
ಗ್ರಾಮ ಪಂಚಾಯತಿ ಸದಸ್ಯ ಅನೀಸ್ ಮನ್ಸೂರ್ ಮಲ್ಲತ್ ಅಧ್ಯಕ್ಷತೆ ವಹಿಸಿದರು. ಅಧ್ಯಕ್ಷ ಖಾಲಿದ್ ಬೆಳ್ಳಿಪ್ಪಾಡಿ ಉದ್ಘಾಟಿಸಿದರು. ಗ್ರಾಮ ಸಭಾ ಸಂಯೋಜಕ ವೇಣು ಕುಮಾರ್ ಮಾಸ್ತರ್ ಪ್ರತಿಜ್ಞೆ ಬೋಧಿಸಿದರು.
ಯೋಜನಾ ಸಮಿತಿ ಸದಸ್ಯ ಕೆ.ಬಿ.ಮುಹಮ್ಮದ್ ಕುಂಞÂ, ಸಮಾಜ ಸೇವಾ ಕಾರ್ಯಕರ್ತರಾದ ಪ್ರಕಾಶ್ ರಾವ್, ಕೃಷ್ಣನ್ ಚೇಡಿಕ್ಕಾಲ್, ಮಾಧವನ್ ನಂಬ್ಯಾರ್, ಅಬ್ಬಾಸ್ ಕೊಳಚೆಪ್ಪು, ಹಮೀದ್ ಮಲ್ಲ, ಪ್ರಭಾಕರನ್ ಮಾಸ್ತರ್, ಗ್ರಾಮ ವಿಸ್ತರಣಾಧಿಕಾರಿ ಅರುಣ್, ಎನ್.ಆರ್.ಜಿ. ಕ್ಲಾರ್ಕ್ ಶಿಜಿತ್, ಅಂಗನವಾಡಿ ಕಾರ್ಯಕರ್ತೆ ಪುಷ್ಪಾ, ಆಶಾ ಕಾರ್ಯಕರ್ತೆ ಬಿಂದು, ಶ್ರೀಜ, ನಿಶಾ ಮೊದಲಾದವರು ಮಾತನಾಡಿದರು.