ಬದಿಯಡ್ಕ: ಜೀರ್ಣೋದ್ಧಾರ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುತ್ತಿರುವ ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವಿ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಕಾರ್ಯಕ್ರಮಗಳು ವೈದಿಕ ಕಾರ್ಯಕ್ರಮಗಳೊಂದಿಗೆ ಫೆ.21ರಂದು ನಡೆಯಲಿರುವುದು. ಅಂದು ಬೆಳಗ್ಗೆ ನವಕಾಭಿಷೇಕ, ಮಧ್ಯಾಹ್ನ ಬಲಿವಾಡು ಕೂಟ, ಭೋಜನ ಪ್ರಸಾದ, ಸಂಜೆ 6ರಿಂದ ಏಕಾದಶ ರುದ್ರಾಭಿಷೇಕ, ರಾತ್ರಿ 8ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿರುವುದು. ಬೆಳಗ್ಗೆ 10.30ರಿಂದ ಜೀರ್ಣೋದ್ಧಾರ ಸಮಿತಿಯ ಸಭೆಯು ಜರಗಲಿರುವುದು. ಊರಪರವೂರ ಭಕ್ತಾದಿಗಳು, ಜೀರ್ಣೋದ್ಧಾರ ಸಮಿತಿ, ಮಾತೃಸಂಘ, ಯುವಸಮಿತಿ ಹಾಗೂ ಪ್ರಾದೇಶಿಕ ಯುವ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಳ್ಳಬೇಕೆಂದು ತಿಳಿಸಲಾಗಿದೆ.
ನಾಳೆ ಉಬ್ರಂಗಳ ಶ್ರೀ ಕ್ಷೇತ್ರದಲ್ಲಿ ಶಿವರಾತ್ರಿ- ಜೀರ್ಣೋದ್ಧಾರ ಸಮಿತಿಯ ಸಭೆ
0
ಫೆಬ್ರವರಿ 19, 2020