ಶ್ರೀನಗರ: ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಹಾಗೂ ಒಮರ್ ಅಬ್ದುಲ್ಲಾ ಹಾಗೂ ನ್ಯಾಷನಲ್ ಕಾನ್ಫರೆನ್ಸ್ , ಪಿಡಿಪಿಯ ಇತರ ಇಬ್ಬರು ರಾಜಕಾರಣಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಫ್ತಿ ಬಂಧನದಲ್ಲಿರುವ ಬಂಗಲೆಗೆ ಆದೇಶವನ್ನು ಪೆÇಲೀಸರೊಂದಿಗೆ ಮ್ಯಾಜಿಸ್ಟ್ರೇಟ್ ವೊಬ್ಬರು ಆದೇಶ ಕಳುಹಿಸಿದ್ದಾರೆ. ಅಬ್ದುಲ್ಲಾ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಅವರು ಹೇಳಿದ್ದಾರೆ.ನ್ಯಾಷನಲ್ ಕಾನ್ಫರೆನ್ಸ್ ಪ್ರಧಾನ ಕಾರ್ಯದರ್ಶಿ ಆಲಿ ಮೊಹಮ್ಮದ್ ಸಾಗರ್ ಅವರಿಗೂ ನೋಟಿಸ್ ಕಳುಹಿಸಲಾಗಿದೆ. ಇದೇ ರೀತಿಯಲ್ಲಿ ಪಿಡಿಪಿ ಮುಖಂಡರಾದ ಸರ್ತಾಜ್ ಮಾದಾನಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ 2019 ಆಗಸ್ಟ್ 5 ರಿಂದಲೂ ಸಾಗರ್ ಹಾಗೂ ಮಾದಾನಿ ಗೃಹ ಬಂಧನದಲ್ಲಿದ್ದರು. ಅವರ ಆರು ತಿಂಗಳ ಕಸ್ಟಡಿ ಗುರುವಾರ ಕೊನೆಗೊಂಡಿತು
ಇದಕ್ಕೂ ಮುಂಚೆ ಮಾಜಿ ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಅಹ್ನದ್ ವೀರಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ, ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಎಂಬುದು ತಿಳಿದುಬಂದಿದೆ.