ಬದಿಯಡ್ಕ: ಕಲಿ ನಲಿ ಉದ್ದೇಶದೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಿದ್ಯಾರ್ಥಿಗಳು ಉಕ್ಕಿನಡ್ಕ ಸಮೀಪದ ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಹಸಿರ ಮಡಿಲಲ್ಲಿ ಕುಣಿದಾಡಿದರು. ಆಟದೊಂದಿಗೆ ಕಲಿಕೆಯ ಜ್ಞಾನವೃದ್ಧಿಗೋಸ್ಕರ ಒಂದು ದಿನದ ಸಹವಾಸ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಕೃಷಿಭೂಮಿಯ ಅಧ್ಯಯನ, ಉತ್ಪನ್ನಗಳ ಉಪಯೋಗ, ದಾಸ್ತಾನೀಕರಣ, ಉಪಬೆಳೆಗಳ ಪರಿಚಯ, ಕೃಷಿಭೂಮಿಗೆ ನೀರುಣಿಸುವಿಕೆ ಮೊದಲಾದ ಪ್ರಕ್ರಿಯೆಗಳನ್ನು ಅನುಭವಿ ಕೃಷಿ ಮಹೇಶ್ ಗುತ್ತು ತಿಳಿಸಿಕೊಟ್ಟರು. ಅಡಿಕೆ ಮರವೇರುವ ಕೌಶಲ್ಯವನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಾವೂ ಮರವೇರಿ ಸೈ ಎನಿಸಿಕೊಂಡರು. ಅಡಿಕೆ ಹಾಳೆಗಳ ಕೈಗಾಡಿಯ ಅನುಭವ, ಬಾವಿಯಿಂದ ನೀರು ಸೇದುವ ವಿಧಾನ, ಗೊನೆಯಿಂದ ಹಣ್ಣಡಿಕೆಯನ್ನು ಬೇರ್ಪಡಿಸುವ ತಂತ್ರಗಾರಿಕೆ ಮನೋರಂಜನೆಯೊಂದಿಗೆ ಗುಂಪಿನಲ್ಲಿ ಚರ್ಚಿಸುತ್ತಾ ಕಲಿತರು. ಪ್ರಾದೇಶಿಕ ಯುವಕರ ತಂಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಪಾಯಸದೂಟವನ್ನು ಉಣಬಡಿಸಿದರು. ಜೀರ್ಣೋದ್ಧಾರಗೊಳ್ಳುತ್ತಿರುವ ದೇವಸ್ಥಾನದ ಗರ್ಭಗುಡಿ, ನಮಸ್ಕಾರ ಮಂಟಪಗಳನ್ನು ವೀಕ್ಷಿಸಿ ವೈಜ್ಞಾನಿಕ ಸತ್ಯಗಳನ್ನು ಅರಿತುಕೊಂಡರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಅಧ್ಯಾಪಕ ವೃಂದ ನೇತೃತ್ವವನ್ನು ವಹಿಸಿದ್ದರು.
ನೆಲ್ಲಿಕುಂಜೆ ಕ್ಷೇತ್ರ ಪರಿಸರದ ಹಸಿರುವನದಲ್ಲಿ ಕುಣಿದಾಡಿದ ವಿದ್ಯಾರ್ಥಿಗಳು
0
ಫೆಬ್ರವರಿ 11, 2020