ಪೆರ್ಲ: ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಐದು ದಿಉವಸಗಳ ಜಾತ್ರಾಮಹೋತ್ಸವಕ್ಕೆ ಶನಿವಾರ ಧ್ವಜಾರೋಹಣ ನಡೆಯಿತು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಈ ಸಂದರ್ಭ ಕ್ಷೇತ್ರ ಸಮಿತಿ ಪದಾಧಿಕಾರಿಗಳು, ಊರ ಮಹನೀಯರು ಉಪಸ್ಥಿತರಿದ್ದರು.
ಈ ಸಂದರ್ಭ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರ ವಠಾರದಿಂದ ಹಸಿರುವಾಣಿ ಸಮರ್ಪಣಾ ಮೆರವಣಿಗೆ ದೇವಸ್ಥಾನದ ವರೆಗೆ ನಡೆಯಿತು. ಸಮವಸ್ತ್ರಧಾರಿ ಮಹಿಳೆಯರು, ಬ್ಯಾಂಡ್‍ಮೇಳದೊಂದಿಗೆ ಮೆರವಣಿಗೆ ಸಾಗಿಬಂದಿತ್ತು. ನಂತರ ಉಗ್ರಾಣಭರಣ ಕಾರ್ಯಕ್ರಮ ಜರುಗಿತು.
ಇಂದು ಬೆಳಗ್ಗೆ 8ಕ್ಕೆ 108ಕಾಯಿ ಗಣಪತಿ ಹವನ, ಮಹಾರುದ್ರಯಾಗ, ರಾತ್ರಿ 8ಕ್ಕೆ ಶಿವಾಂಜಲಿ ನೃತ್ಯ ಕೇಂದ್ರ ಪೆರ್ಲ ವತಿಯಿಂದ ಭರತನಾಟ್ಯ-ಜಾನಪದ ನೃತ್ಯ ಜರುಗಲಿದೆ. 3ರಂದು ಬೆಳಗ್ಗೆ 6ಕ್ಕೆ ಚಂಡಿಕಾ ಹವನ, ತುಲಾಭಾರ, ಸಾಯಂಕಾಲ 6ಕ್ಕೆ ಕಜಂಬು ಉತ್ಸವ, ರಾತ್ರಿ 8ಕ್ಕೆ ಶ್ರೀ ಉಳ್ಳಾಲ್ತೀ ನೆಮೋತ್ಸವನಡೆಯುವುದು. ಫೆ. 4ರಂದು ಬೆಳಗ್ಗೆ 10ಕ್ಕೆ ಸತ್ಯನಾರಾಯಣ ಪೂಜೆ, 7.30ಕ್ಕೆ ಸುಡುಮದ್ದು ಪ್ರದರ್ಶನ, ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು, ಶ್ರೀ ದೈವದ ತೊಡಙಳ್, ಕುಳಿಚ್ಚಾಟ, ರಾತ್ರಿ 8.30ಕ್ಕೆ ನೃತ್ಯ ವೈವಿಧ್ಯ ನಡೆಯುವುದು. 5ರಂದು ಬೆಳಗ್ಗೆ 9ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯುವುದು.