HEALTH TIPS

ಬೋಳಂಗಳ ಅಣ್ಣ-ತಮ್ಮ ಜೋಡುಕರೆ ಕಂಬಳ-ವ್ಯಾವಹಾರಿಕತೆಗಿಂತ ಮಿಗಿಲಾದ ಹೆಗ್ಗುರುತುಗಳು ಗ್ರಾಮೀಣ ವ್ಯವಸ್ಥೆ-ರಂಗತ್ರೈ ಬಲ್ಲಾಳ ಅರಸರು


     ಉಪ್ಪಳ: ತುಳುನಾಡಿನ ಪರಂಪರೆ-ಆಚರಣೆಗಳನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಸಂರಕ್ಷಿಸುವ, ಪ್ರದರ್ಶಿಸುವ ಅವಕಾಶಗಳಿಗೆ ಜನಸಾಮಾನ್ಯರ ಸಹಿತ ಸಮಾಜ ಮುಕ್ತ ಬೆಂಬಲ ನೀಡಬೇಕು. ಕೃಷಿ ಪ್ರಧಾನ ಸಂಸ್ಕøತಿಯ ಅಳಿದುಳಿದ ಪಳೆಯುಳಿಕೆಗಳ ನಾಶ ಸಾಂಸ್ಕøತಿಕತೆಯ ಅಧಃಪತನಕ್ಕೆ ಮತ್ತಷ್ಟು ಕಾರಣವಾಗಿ ವರ್ತಮಾನದ ಸಭ್ಯ ನಾಗರಿಕ ವರ್ಗದ ಇತರ ಸಾಧನೆಗಳೆಲ್ಲವನ್ನೂ ಮರೆಮಾಚುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಂಬಳದಂತಹ ಗ್ರಾಮೀಣ ಕ್ರೀಡೆಗಳಿಗೂ ಹೆಚ್ಚು ಆದ್ಯತೆ ನೀಡಬೇಕು ಎಮದು ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ ಅರಸರು ಕರೆ ನೀಡಿದರು.
      ಪೈವಳಿಕೆ ಸಮೀಪದ ಕಾಯರ್ಕಟ್ಟೆ ಬೋಳಂಗಳ ಅಣ್ಣ ತಮ್ಮ ಜೋಡುಕರೆ ಕಂಬಳ ಸಮಿತಿ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಇದರ ಸಹಯೋಗದಲ್ಲಿ ಬೋಳಂಗಳದಲ್ಲಿ ಶನಿವಾರ ನಡೆದ ಅಣ್ಣ ತಮ್ಮ ಜೋಡುಕರೆ ಕಂಬಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ನಮ್ಮ ಆಶೋತ್ತರವಾಗಿ ಪರಿಗಣಿಸಿರುವ ಯುವ ಪೀಳಿಗೆಗೆ ಸಂಪತ್ತು, ಸೌಲಭ್ಯಗಳನ್ನು ಮಾತ್ರ ಕಾಪಿಟ್ಟಲ್ಲಿಗೆ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ. ಭಾಷೆ, ಸಮಸ್ಕøತಿ, ಅದರೊಂದಿಗೆ ಸಂವಾದಿಯಾಗಿ ಬಂದಿರುವ ಸಾಂಸ್ಕøತಿ, ಸಾಮಾಜಿಕ ಪರಂಪರೆಯನ್ನೂ ಹಸ್ತಾಂತರಿಸುವ ಮಹತ್ವವವನ್ನೂ ನಾವು ಅರ್ಥೈಸಿ ಮುನ್ನಡೆಯಬೇಕು ಎಮದು ಅವರು ಈ ಸಂದರ್ಭ ತಿಳಿಸಿದರು. ವ್ಯಾವಹಾರಿಕತೆಗಿಂತ ಮಿಗಿಲಾದ ವ್ಯವಸ್ಥೆ ಗ್ರಾಮೀಣತೆಯ ಹೆಗ್ಗುರುತುಗಳಾಗಿದ್ದು ನಿಜವಾದ ನೆಮ್ಮದಿ ಗ್ರಾಮಗಳು, ಗ್ರಾಮೀಣ ನಂಬಿಕೆ, ಆಚರಣೆ, ಸಮಬಂಧಗಳಲ್ಲಿ ಅಡಗಿದೆ ಎಂದು ತಿಳಿಸಿದರು.
    ಸಮಾರಂಭವನ್ನು ದೀಪ ಬೆಳಗಿಸಿ ಚಾಲನೆ ನೀಡಿದ ತಂತ್ರಿವರ್ಯ ರಾಮಪ್ರಸಾದ ನಲ್ಲೂರಾಯ ಉರ್ಮಿ ಅವರು ಮಾತನಾಡಿ, ಮತ-ಧರ್ಮಗಳ ವೈಷಮ್ಯ, ಮೇಲು-ಕೀಳುಗಳಂತಹ ಸೀಮಿತ ತರ್ಕಗಳನ್ನು ಮೀರಿ ಸರ್ವರೂ ಜೊತೆಗೂಡಿ ಬಾಳ್ವೆ ನಡೆಸುವ ತುಳುನಾಡಿನ ಪ್ರಾಚೀನತೆ ಇಂತಹ ಆಚರಣೆಗಳ ಮರು ಚಿಂತನೆಗಳ ಮೂಲಕ ಸಾಕಾರಗೊಳ್ಳಬೇಕು. ಹೃದಯ ಅರಳಿ ನೆಮ್ಮದಿಗೆ ಕಾರಣವಾಗಬೇಕು ಎಂದು ಹಾರೈಸಿದರು.
    ಪೈವಳಿಕೆ ಗ್ರಾ.ಪಂ.ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ ಶೆಟ್ಟಿ, ಧಾರ್ಮಿಕ ಮುಖಂಡ ಸೀತಾರಾಮ ಬಲ್ಲಾಳ್ ಚಿಪ್ಪಾರು, ಉದ್ಯಮಿ ಶ್ರೀಧರ ಶೆಟ್ಟಿ ಮುಟ್ಟಂ, ಅಬ್ಬು ತಮಾಮ್ ಉಪ್ಪಳ, ಮೀಂಜ ಗ್ರಾ.ಪಂ.ಅಧ್ಯಕ್ಷೆ ಶಂಶಾದ್ ಶುಕೂರ್, ವರ್ಕಾಡಿ ಗ್ರಾ.ಪಂ.ಅಧ್ಯಕ್ಷ ಅಬ್ದುಲ್ ಮಜೀದ್, ಬ್ಲಾ.ಪಂ.ಉಪಾಧ್ಯಕ್ಷೆ ಮಮತಾ ದಿವಾಕರ್, ಚಿಪ್ಪಾರು ಅಮ್ಮೇರಿ ಗರಡಿಯ ಆಡಳಿತ ಮೊಕ್ತೇಸರ ಅಶೋಕ್ ಎಂ.ಸಿ, ಅಬ್ದುಲ್ ರಸಾಕ್ ಚಿಪ್ಪಾರು, ಜಯರಾಮ ಬಲ್ಲಂಗುಡೇಲು, ಹರಿಶ್ಚಂದ್ರ ಮಂಜೇಶ್ವರ, ಮೊಹಮ್ಮದ್ ಚೆರೋಳಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಪೈವಳಿಕೆ ಗ್ರಾ.ಪಂ.ನ ಎಲ್ಲಾ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಅಜಿತ್ ಎಂ.ಸಿ.ಲಾಲ್‍ಬಾಗ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಕಡಂಬಾರ್ ವಂದಿಸಿದರು. ಸ್ವಾಗತ ಸಮಿತಿ ಕಾರ್ಯದರ್ಶಿ ಅಶ್ವಥ್ ಪೂಜಾರಿ ಲಾಲ್‍ಬಾಗ್ ಕಾರ್ಯಕ್ರಮ ನಿರೂಪಿಸಿದರು.ಇದೇ ಸಂದರ್ಭ ಕಂಬಳ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
   ಬಳಿಕ ವಿವಿಧಡೆಗಳಿಂದ ಬಂದ ಜೋಡಿ ಕೋಣಗಳ ಅಣ್ಣ ತಮ್ಮ ಜೋಡುಕರೆ ಕಂಬಳ ಪ್ರಾರಂಭಗೊಂಡಿತು. ಸುಮಾರು 110ಕ್ಕಿಂತಲೂ ಮಿಕ್ಕಿದ ಜೋಡಿ ಕೋಣಗಳು ಭಾಗವಹಿಸಿದ್ದವು.
   ಇಂದು ಬಹುಮಾನ ವಿತರಣೆ:
       ಫೆ.23ರಂದು ಬೆಳಿಗ್ಗೆ 9.30ಕ್ಕೆ ಬಹುಮಾನ ವಿತರಣಾ ಸಮಾರಂಭ ನಡೆಯಲಿದ್ದು, ಕಂಬಾರು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಅಧ್ಯಕ್ಷ ಕುಂಞಣ್ಣ ಭಂಡಾರಿ ಕೋಳಾರು ಅಧ್ಯಕ್ಷತೆ ವಹಿಸುವರು. ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries