ಬೀಜಿಂಗ್ : ಕೊರೋನಾ ವೈರಸ್ ಹಾವಳಿಯನ್ನು ಪರಿಣಾಮಕಾರಿಯಾಗಿ ಎದುರಿಸುವ ಜಾಗತಿಕ ಕಾರ್ಯತಂತ್ರಕ್ಕಾಗಿ ವಿಶ್ವದ ಕುಬೇರ ಎಂದೇ ಗುರುತಿಸಿಕೊಂಡಿರುವ ಮೈಕ್ರೋಸಾಫ್ಟ್ ದಿಗ್ಗಜ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ 100 ಮಿಲಿಯನ್ ಡಾಲರ್ ಸುಮಾರು 718 ಕೋಟಿ ರೂಪಾಯಿ ದೇಣಿಗೆ ನೀಡಿ ಔದಾರ್ಯ ಮೆರೆದಿದೆ.
ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ನ 'ಔದಾರ್ಯ'ಕ್ಕಾಗಿ ಮತ್ತು ಮಾರಕ ಕೊರೋನವೈರಸ್ ಸೋಂಕನ್ನು ಎದುರಿಸಲು ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಸೇರಿದಂತೆ ದಂತೆ ವಿಶ್ವದ ಹಲವು ನಾಯಕರು ಕೊಡಗೆಯನ್ನು ಸ್ಮರಿಸಿದ್ದಾರೆ.
ಈ ಸಂಬಂಧ ಚೀನಾ ಅಧ್ಯಕ್ಷರು ಫೌಂಡೇಶನ್ ಗೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತು ಸಹಾಯದ ಹಸ್ತಚಾಚಿದ ಗೇಟ್ ಉಪಕಾರವನ್ನು ಸ್ಮರಿಸಿ ಧನ್ಯವಾದ ಹೇಳಿದ್ದಾರೆ.