HEALTH TIPS

ಯುವಕ ಸಂಘಗಳು ಜನಸಾಮಾನ್ಯರ ಪಾಲಿಗೆ ಬೆಳಕಾಗಬೇಕಿದೆ- ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ವಾರ್ಷಿಕೋತ್ಸವದಲ್ಲಿ ಯೋಗೀಶ ರಾವ್ ಚಿಗುರುಪಾದೆ


           ಉಪ್ಪಳ : ಯುವಕ ಸಂಘಗಳು ನಾಡಿನ ಜನಸಾಮಾನ್ಯರ ಪಾಲಿಗೆ ಬೆಳಕಾಗಿ ನಾಡಿನ ಜನರ ಆಗುಹೋಗುಗಳಿಗೆ ಸ್ಪಂದಿಸುತ್ತಾ ಅವರ ಕಷ್ಟಗಳಿಗೆ ಹೆಗಲು ಕೊಟ್ಟು ದುಡಿಯುವ ಪರಿಪಾಠವನ್ನು ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಅವರು ತಿಳಿಸಿದರು.
       ಜೋಡುಕಲ್ಲಿನ ಫ್ರೆಂಡ್ಸ್ ಕ್ಲಬ್ ಸಂಸ್ಥೆಯ ಇತ್ತೀಚೆಗೆ ನಡೆದ 30ನೇ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಜನಸೇವೆ ಗೈಯುವ ಅವಕಾಶ ಯುವಕ ಸಂಘಗಳಿಗೆ ಇಂದು ಸಾಕಷ್ಟಿದ್ದು,  ವೈದ್ಯಕೀಯ ಶಿಬಿರಗಳ ಮೂಲಕ, ಕಾನೂನು ಮಾರ್ಗದರ್ಶನ ಶಿಬಿರಗಳ ಮೂಲಕ, ರಕ್ತ ದಾನ ಶಿಬಿರಗಳ ಮೂಲಕ, ಜನಸೇವೆ ಗೈಯಬಹುದಾಗಿದೆ. ಮಾತ್ರವಲ್ಲ ಅತೀವೇಗವಾಗಿ ಬದಲಾಗುತ್ತಿರುವ ಮಾಹಿತಿ ತಂತ್ರಜ್ಞಾನ, ಮೊಬೈಲ್, ಕಂಪ್ಯೂಟರ್, ಸದ್ಬಳಕೆ, ಓನ್ ಲೈನ್ ಹಣಪಾವತಿ, ಈ ಮೈಲ್ ಖಾತೆ ತೆರೆಯುವುದು ಹಾಗೂ ಸದ್ಬಳಕೆಯಂತಹ ಕನಿಷ್ಟ ತಂತ್ರಜ್ಞಾನ ಮಾಹಿತಿಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಯುವಕ ಸಂಘಗಳು ಮಾಡಬೇಕಾಗಿದೆ ಯೋಧರನ್ನು ಹಾಗೂ ಕೃಷಿಕರನ್ನು ಗುರುತಿಸುವ ಕಾರ್ಯ ಶ್ರೇಷ್ಠವಾದದ್ದು ಎಂದು ಅಭಿಪ್ರಾಯ ಪಟ್ಟರು.
      ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಷ್ಟ್ರ ಸೇವಿಕಾ ಸಮಿತಿಯ ಜಿಲ್ಲಾ ಕಾರ್ಯವಾಹಿಕೆ ಸರಿತ ದಿನೇಶ್ ಮಾತನಾಡಿ ತಾಯಂದಿರು ಮಕ್ಕಳಿಗೆ ಸಂಸ್ಕಾರವನ್ನು ನೀಡುವಲ್ಲಿ ಹೆಚ್ಚಿನ ಗಮನ ನೀಡಬೇಕಾಗಿದೆ. ಪ್ರತಿಯೊಂದು ಮನೆಯೂ ಸಂಸ್ಕಾರ ಕೇಂದ್ರಗಳಾಗ ಬೇಕಾಗಿದೆ, ಬಾಲ್ಯದಲ್ಲಿ ನಾವು ನೀಡುವ ಸಂಸ್ಕಾರ ಮಕ್ಕಳ ಬದುಕಿನಲ್ಲಿ ಭವಿಷ್ಯದಲ್ಲಿ ಮಹತ್ತರ ಪರಿಣಾಮವನ್ನುಂಟುಮಾಡುತ್ತದೆ. ಯುವಕ ಸಂಘಗಳೂ ಸಮಾಜಕ್ಕೆ ಯೋಗ್ಯ ಸಂಸ್ಕಾರವನ್ನು ನೀಡುವಲ್ಲಿ ಹೆಚ್ಚಿನ ಪಾತ್ರವಹಿಸಬೇಕಿದೆ, ಜೈ ಜವಾನ್ ಜೈ ಕಿಸಾನ್ ಎಂಬಂತೆ ಈ ದಿನ ಪ್ರಗತಿಪರ ರೈತರನ್ನೂ ಗಡಿಕಾಯುವ ಯೋಧರನ್ನೂ ಗೌರವಿಸುವಂತಾದುದು ಅರ್ಥವತ್ತಾದ ಕಾರ್ಯಕ್ರಮ ಎಂದರು.
   ಫ್ರೆಂಡ್ಸ್ ಕ್ಲಬ್ ಆಧ್ಯಕ್ಷ ದಯಾನಂದ ಮಡಂದೂರು ಉಪಸ್ಥಿತರಿದ್ದ ಸಮಾರಂಭದಲ್ಲಿ  ಪ್ರಗತಿಪರ ಕೃಷಿಕ ಹಾಗೂ ಸಮಾಜ ಸೇವಕ ದಾಮೋದರ ಉಬರಳೆ ಹಾಗೂ ಭಾರತೀಯ ಸೈನ್ಯದ ಯೋಧ ಪ್ರವೀಣ ಕುಬಣೂರು ಅವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಲಾಯಿತು. ಶಿವಪ್ರಸಾದ್ ಪಟ್ಲ ಸ್ವಾಗತಿಸಿ, ರಾಜ ಅರಿಯಾಳ ವಂದಿಸಿದರು. ಪ್ರಶಾಂತ್ ಕೆ.ಪಿ.ಕಾರ್ಯಕ್ರಮ ನಿರೂಪಿಸಿದರು. ಲಿಖಿತ ಶೆಟ್ಟಿ ಪ್ರಾರ್ಥನೆ ಹಾಡಿದರು. ಸಭೆಯಲ್ಲಿ  ಕಯ್ಯಾರು ಶ್ರೀ ರಾಮಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ರ್ಯಾಂಕ್ ವಿಜೇತ ಮಕ್ಕಳಿಗೆ ಹಾಗೂ ಜೋಡುಕಲ್ಲು ಕೇಶವ ಶಿಶುಮಂದಿರದ ಪುಟಾಣಿ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಬಳಿಕ ಭ್ರಾಮರಿ ಕಲಾವಿದೆರ್ ಉಪ್ಪಳ ತಂಡದಿಂದ ಬಚ್ಚಾಲಿ ಆಂಡಲಾ ಮೆಚ್ಚೋಲಿ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries