ಉಪ್ಪಳ: ಅಣ್ಣ-ತಮ್ಮ ಜೋಡುಕರೆ ಕಂಬಳ ಸಮಿತಿ ಬೋಳಂಗಳ ಇದರ ನೇತೃತ್ವದಲ್ಲಿ ದ್ವಿತೀಯ ವರ್ಷದ ಅಣ್ಣ-ತಮ್ಮ ಜೋಡುಕರೆ ಕಂಬಳವು ಜನಪದ ಗ್ರಾಮೀಣ ಕ್ರೀಡೆಗಳೊಂದಿಗೆ ಫೆ.21 ರಿಂದ 23ರ ವರೆಗೆ ಪೈವಳಿಕೆ ಬೋಳಂಗಳ ದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗುರುವಾರ ಪೈವಳಿಕೆ ಅರಮನೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಆಮಂತ್ರಣ ಪತ್ರಿಕೆಯನ್ನು ಪೈವಳಿಕೆ ಅರಮನೆಯ ರಂಗತ್ರೈ ಬಲ್ಲಾಳ ಅರಸರು ಬಿಡುಗಡೆಗೊಳಿಸಿದರು. ಈ ಸಂದರ್ಭ ಸಮಿತಿ ಅಧ್ಯಕ್ಷ ಭಾಸ್ಕರ ರೈ, ಪ್ರಧಾನ ಕಾರ್ಯದರ್ಶಿ ಅಶ್ವಥ್ ಪೂಜಾರಿ ಲಾಲ್‍ಬಾಗ್, ಕಂಬಳ ಉತ್ಸವ ಸಮಿತಿ ಅಧ್ಯಕ್ಷ ಅಜಿತ್ ಎಂ.ಸಿ.ಲಾಲ್‍ಬಾಗ್, ಪದಾಧಿಕಾರಿಗಳಾದ ಸುಧಾಕರ ಶೆಟ್ಟಿ ಕಳಾಯಿ, ಜಗದೀಶ ಶೆಟ್ಟಿ ಉರ್ಮಿ, ರಾಘವ ಪೈವಳಿಕೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಕ ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.