ಕಾಸರಗೋಡು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಂಟನ್ನು ಹೊಂದಿರುವ ಗಡಿನಾಡ ಕಾಸರಗೋಡು ಜಿಲ್ಲೆಯಲ್ಲಿ ತಮ್ಮದೇ ಆದ ಹೊಟೇಲ್ ಉದ್ಯಮವನ್ನು ನಡೆಸಿಕೊಂಡು ಶ್ರಮ ಜೀವಿಯಾಗಿ ವಿವಿಧ ಸಂಘಟನೆಗಳಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ, ಪರೋಪಕಾರಿಯಾಗಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಆಲ್ ಕೇರಳ ಉಡುಪಿ ಮಾಧ್ವ ಬ್ರಾಹ್ಮಣ ಸಭಾದ ರಕ್ಷಾ„ಕಾರಿಯಾದ ರಾಮ್ ಪ್ರಸಾದ್ ಭಟ್ ಸಹೋದರರ ಸಾಧನೆ ಶ್ಲಾಘನೀಯ ಎಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಾಸ್ತು ತಜ್ಞ ಹಾಗು ವೈಜ್ಞಾನಿಕ ಜ್ಯೋತಿಷ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಅವರು ಕಾಸರಗೋಡಿನ ಈಶಾ ವಾಸ್ಯಂನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕಾಸರಗೋಡು ಕರ್ನಾಟಕದಿಂದ ಬೇರೆಯಾಗಿ ಕೇರಳ ಜೊತೆ ಸೇರಿದ್ದರೂ ಇಂದಿಗೂ ಇಲ್ಲಿಯ ಜನತೆಯ ಜೊತೆ ತಮಗೆ ಇರುವ ಅವಿನಾಭಾವ ಸಂಬಂಧವನ್ನು ಸ್ವಾಮೀಜಿಯವರು ಸ್ಮರಿಸಿಕೊಂಡರು.
ಕಾರ್ಯಕ್ರಮದಲ್ಲಿ ಸಾಧಕರಾದ ರಾಮ್ ಪ್ರಸಾದ್ ಭಟ್ ಕಾಸರಗೋಡು, ವಸಂತ ಕುಮಾರ್, ಶ್ರೀನಿವಾಸ ಕೆ.ಎಂ, ಲಕ್ಷ್ಮೀಶ್ ಭಟ್, ಮಹೇಶ್ ಭಟ್ ಕಾಸರಗೋಡು ಅವರನ್ನು ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಸಮ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕ ಜ್ಯೋತಿಷ್ಯ ಹಾಗು ವಾಸ್ತು ತಜ್ಞರಾಗಿ ಸಾಧನೆ ಮಾಡಿದ ನೆಲೆಯಲ್ಲಿ ಚಂದ್ರಶೇಖರ ಸ್ವಾಮೀಜಿ, ರಜನಿ ಚಂದ್ರಶೇಖರ ಭಟ್ ದಂಪತಿಗಳನ್ನು ಹಾಗು ಪುತ್ರಿ ರೋಶನಿ ಭಟ್ ಅವರನ್ನು ರಾಮ್ ಪ್ರಸಾದ್ ಸಹೋದರರು ಗೌರವಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಪುತ್ತಿಗೆ ಮಠದ ಲಕ್ಷ್ಮೀನಾರಾಯಣ ಭಟ್, ಮಾತೃಶ್ರೀ ರತ್ನಾವತಿ, ಪದ್ಮಶ್ರೀ ಭಟ್, ನಮಿತಾ ಭಟ್, ರೇಣುಕಾ ಭಟ್, ರೂಪಾ ಭಟ್, ಸುಚಿತ್ರ ಭಟ್, ಸುಬ್ರಹ್ಮಣ್ಯ ಬೆಂಗಳೂರು, ಶ್ಯಾಮಲಾ ತಂತ್ರಿ ಕೊಡಂಗಾಯ ವಿಟ್ಲ, ರಾಹುಲ್, ಅನನ್ಯ, ಅನುಷಾ, ಅನುದೀಪ್, ಅಖಿಲ್ ಮಾಧವ್, ಗೋಕುಲ್ ಕಾಸರಗೋಡು, ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಮಾಧ್ಯಮ ಸಂಚಾಲಕರಾದ ಪುನೀತ್ ಕೃಷ್ಣ, ದೇವಿಪ್ರಸಾದ್ ಕೆಂಪುಗುಡ್ಡೆ, ಭದ್ರತಾ ಸಿಬ್ಬಂದಿ ಮಂಜುನಾಥ ಗೌಡ್ರು, ಪ್ರದೀಪ್ ಗೌಡ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು. ರಾಮ್ ಪ್ರಸಾದ್ ಭಟ್ ಕಾಸರಗೋಡು ಸ್ವಾಗತಿಸಿದರು. ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಮಹೇಶ್ ಭಟ್ ವಂದಿಸಿದರು.