ಪೆರ್ಲ:ಕೃಷಿ ಅಭಿವೃದ್ಧಿ, ಕೃಷಿಕರ ಕ್ಷೇಮ ಇಲಾಖೆ ವಿಷರಹಿತ 'ಹಸಿರು ತರಕಾರಿಯತ್ತ ಕೇರಳ- ನಮ್ಮ ಕೃಷಿ ನಮ್ಮ ಆರೋಗ್ಯ' 'ಜೀವನಿ' ಯೋಜನೆ ಭಾಗವಾಗಿ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ಮಂಗಳವಾರ 6ನೇ ವಾರ್ಡ್ ಸ್ವರ್ಗ ಆರ್ಗೇನಿಕ್ ಕ್ಲಸ್ಟರ್ ಮಟ್ಟದ 40 ಕೃಷಿಕರಿಗೆ ತಲಾ 25 ಉಚಿತ ಟಿಶ್ಯೂ ಬಾಳೆಗಿಡ, ಎರಡು ಚೀಲ ಸಾವಯವ ಗೊಬ್ಬರ ವಿತರಿಸಲಾಯಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ. ಅವರು ಕ್ಲಸ್ಟರ್ ಸಂಚಾಲಕ ರವಿ ವಾಣೀನಗರ ಅವರಿಗೆ ಬಾಳೆ ಗಿಡ ವಿತರಿಸುವ ಮೂಲಕ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ಖಂಡಿಗೆ, ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ, ಚಂದ್ರಾವತಿ ಎಂ., ಮುಖ್ಯ ಶಿಕ್ಷಕಿ ಗೀತಾಕುಮಾರಿ, ರಾಜ್ಯ ಹಾರ್ಟಿಕಲ್ಚರ್ ಮಿಷನ್ ಸಹಾಯಕ ನಿರ್ದೇಶಕ, ಮಂಜೇಶ್ವರ ಬ್ಲಾಕ್ ನೋಡಲ್ ಅಧಿಕಾರಿ ಉಮೇಶ್, ಕೃಷಿ ಅಧಿಕಾರಿ ವಿನೀತ್ ವಿ. ವರ್ಮ, ಕ್ಲಸ್ಟರ್ ಸದಸ್ಯರು ಉಪಸ್ಥಿತರಿದ್ದರು. ಕೃಷಿ ಸಹಾಯಕ ಮುರಳೀಧರನ್, ಶ್ರೀಹರಿ, ಮನೋಹರನ್ ಸಹಕರಿಸಿದರು.