ಮುಳ್ಳೇರಿಯ: ಧಾರ್ಮಿಕ ಶ್ರದ್ದಾ ಕೇಂದ್ರಗಳು, ಅಲ್ಲಿ ಪಾಲಿಸ ಬೇಕಾದ ಆಚಾರ ವಿಚಾರಗಳು, ಪ್ರಾರ್ಥನೆಯ ಮಹತ್ವ, ಭಗವಂತ ನಾಮಸ್ಮರಣೆಯ ವಿಶೇಷತೆಗಳ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇಲ್ಲದಿರುವುದು ಇಂದಿನ ಜಂಜಡದ ಬದುಕಿಗೆ ಕಾರಣವಾಗಿದೆ. ಆದುದರಿಂದ ಧರ್ಮದ ಬಗೆಗಿನ ಜ್ಞಾನವನ್ನು, ಸ್ಪಷ್ಟ ಅರಿವನ್ನು ನೀಡುವ ಕಾರ್ಯ ಆಗಬೇಕು ಎಂದು ಶಿಬಿನ್ ತೃಕ್ಕರಿಪುರ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಭಾಷಣಗೈದು ಮಾತನಾಡಿದರು.
ನಮ್ಮ ಧರ್ಮಕ್ಕೆ ನಮ್ಮಿಂದಲೇ ಚ್ಯುತಿ ಬರುತ್ತಿದೆ. ಧರ್ಮದ ತತ್ವಗಳನ್ನು ಅರಿತು ಜೀವ ಮತ್ತು ಭಗವಂತ ಒಂದೇ ಎಂಬ ಸತ್ಯವನ್ನು ಮನದಟ್ಟು ಮಾಡಿಕೊಂಡಾಗ ಮಾತ್ರ ನಾವು ಹೇಗೆ ಬದುಕ ಬೇಕು, ಜೀವನದ ಲಕ್ಷ್ಯವೇನೆಂಬುದನ್ನು ಅರ್ಥೈಸಲು ಸಾಧ್ಯ. ದೇಹ ಭಗವಂತನ ಜೀವ ಚೈತನ್ಯ ನೆಲೆಯಾಗಿರುವ ತಾಣ. ಹೃದಯದಲ್ಲಿ ಸ್ನೇಹ ರೂಪಿ ಭಗವಂತನಿರುತ್ತಾನೆ. ಬೌದ್ಧಿಕ, ಮಾನಸಿಕ, ಸಾಂಸಾರಿಕ ಕೊರತೆಗಳನ್ನು ನೀಗಿ ಹೊಸ ಬೆಳಕನ್ನು ತುಂಬುವ ಕಾರ್ಯ ದೇವಾಲಯಗಳಿಂದ ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.
ಮಹಿಷಮರ್ಧಿನಿ ಸೇವಾ ಸಮಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸಿದ್ದರು. ಅಗಲ್ಪಾಡಿ ಶ್ರೀಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಅಧ್ಯಾಪಕ ಹರಿನಾರಾಯಣ. ಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಬೆಳ್ಳೂರು ಮಹಾವಿಷ್ಣು ಕ್ಷೇತ್ರದ ಅಧ್ಯಕ್ಷ ಎ.ಬಿ.ಗಂಗಾಧರ ಬಲ್ಲಾಳ್, ಈಶ್ವರ ಚಡಗ ಅಜಿಲ ಬೆಂಗಳೂರು, ಕುಂಬ್ಡಾಜೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆನಂದ.ಕೆ ಮವ್ವಾರ್, ರಾಮಚಂದ್ರ ಭಟ್ ಉಪ್ಪಂಗಳ ಶುಭಾಶಂಸನೆಗೈದರು. ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸದಾಶಿವ ರೈ ಬೆಳಿಂಜ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ದಾಮೋದರ ಮಣಿಯಾಣಿ ಮಲ್ಲಮೂಲೆ, ಪ್ರಧಾನ ಕಾರ್ಯದರ್ಶಿ ಡಾ.ವೇಣುಗೋಪಾಲ ಕಳೆಯತ್ತೋಡಿ, ಸೇವಾ ಸಮಿತಿ ಕಾರ್ಯದರ್ಶಿ ಸುಬ್ಬ ಪಾಟಾಳಿ ಗೋಸಾಡ, ಸೇವಾ ಸಮಿತಿಯ ನಾರಾಯಣ ರೈ ಪೆರಿಂಜೆ, ನಿವೃತ್ತ ಡಿ.ಎಚ್.ಇ.ಒ ರಾಮಚಂದ್ರ ಮಾರ್ಪನಡ್ಕ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಗೋಸಾಡ ಸ್ವಾಗತಿಸಿ ಮಹಿಷಮರ್ಧಿನಿ ಭಜನ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ರೈ ಗೋಸಾಡ ವಂದಿಸಿದರು. ಸಾಂಸ್ಕøತಿ ಸಮಿತಿ ಸಹ ಸಂಚಾಲಕ ಕೃಷ್ಣ.ಡಿ. ಬೆಳಿಂಜ ನಿರೂಪಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಮಹಿಷಮರ್ಧಿನಿ ಮಾತೃಮಂಡಳಿ ಗೋಸಾಡ ಇದರ ಸದಸ್ಯೆಯರಿಂದ ಸುಶೀಲಾ ಗೋಪಾಲನ್ ಅವರ ಪ್ರಾಯೋಜಕತ್ವದಲ್ಲಿ ತಿರುವಾದಿರ ನಡೆಯಿತು.