ಕುಂಬಳೆ: ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಕಾಸರಗೋಡು ಇದರ ಆಶ್ರಯದಲ್ಲಿ ಪಾರೆಕಟ್ಟೆ ಕನ್ನಡ ಗ್ರಾಮದಲ್ಲಿ ಶುಕ್ರವಾರ ನಡೆದ 7ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನದಲ್ಲಿ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ವಿದ್ಯಾರ್ಥಿಗಳು ಭಾವಗಾನ ಸಂಗಮ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ರಂಗಸಿರಿಯ ಸುಗಮ ಸಂಗೀತ ಶಿಕ್ಷಕಿ ಡಾ.ಸ್ನೇಹಾ ಪ್ರಕಾಶ್ ಪೆರ್ಮುಖ ಅವರು ಕನ್ನಡದ ವಿವಿಧ ಕವಿಗಳ ಕವನಗಳಿಗೆ ರಾಗ ಸಂಯೋಜಿಸಿ, ವಿದ್ಯಾರ್ಥಿಗಳಿಗೆ ತರಬೇತು ನೀಡಿದ್ದರು. ಡಾ.ಸ್ನೇಹಾ ಪ್ರಕಾಶ್ ಹಾಗೂ ವಿದ್ಯಾರ್ಥಿಗಳಾದ ಅನ್ವಿತಾ ತಲ್ಪನಾಜೆ, ಅನಘ್ರ್ಯಶ್ರೀ ಹಾಗೂ ಪ್ರಗತಿ ಶರ್ಮ ಪಂಜಿತ್ತಡ್ಕ ಮನೋಹರವಾಗಿ ಹಾಡುಗಳನ್ನು ಪ್ರಸ್ತುತಪಡಿಸಿದರು. ಉತ್ತಮ ಹಿಮ್ಮೇಳ ಸಾಥಿಯೂ ಸೇರಿ ಭಾವಗಾನ ಸಂಗಮ ಜನಮೆಚ್ಚುಗೆ ಪಡೆಯಿತು.