ಕುಂಬಳೆ: ಶೇಡಿಕಾವು ಶ್ರೀ ಶಂಕರನಾರಾಯಣ ದೇವಾಲಯದಲ್ಲಿ ನಾಳೆ ಮಹಾಶಿವರಾತ್ರಿ ಪ್ರಯುಕ್ತ ಪಾರ್ತಿಸುಬ್ಬ ಯಕ್ಷಗಾನ ಸಂಘದ ಆಶ್ರಯದಲ್ಲಿ "ಶಲ್ಯ ಸಾರಥ್ಯ" ಎಂಬ ಪ್ರಸಂಗದ ತಾಳಮದ್ದಳೆ ಕೂಟ ನಡೆಯಲಿದೆ.
ಅಪರಾಹ್ನ 3.30 ರಿಂದ ನಡೆಯುವ ಕೂಟದಲ್ಲಿ ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತ ಪ್ರದೀಪ್ ಕುಮಾರ್ ಗಟ್ಟಿ ಕಂಬಳಪದವು, ಉದಯ ಕಂಬಾರ್,ಮುರಳೀಧರ ಶೇಡಿಕಾವು ಅತಿಥಿ ಕಲಾವಿದರಾಗಿ ಅರ್ಥಗಾರಿಕೆಯಲ್ಲಿ ಪಕಳಕುಂಜ ಶಾಮ್ ಭಟ್,ಪುಷ್ಪರಾಜ ಕುಕ್ಕಾಜೆ ಮತ್ತು ಬಾಲಕೃಷ್ಣ ಆಚಾರ್ಯ ನೀರ್ಚಾಲು ಮತ್ತಿತರರು ಸಹಕರಿಸುವವರು. ಯಕ್ಷಗಾನ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘಟಕರು ವಿನಂತಿಸಿದ್ದಾರೆ.