ನವದೆಹಲಿ: ಜಪಾನ್ ನಲ್ಲಿ ಕ್ರೂಸ್ ಹಡಗಿನಲ್ಲಿರುವ ಇಬ್ಬರು ಭಾರತೀಯರಿಗೆ ಕರೋನ ವೈರಸ್ ಸೋಂಕು ತಗುಲಿದೆ.
ಜಪಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಹಡಗಿನಲ್ಲಿರುವ 3,711 ಜನರ ಪೈಕಿ 174 ಜನರಿಗೆ ಕರೋನ ವೈರಸ್ ಸೋಂಕು ಪತ್ತೆಯಾಗಿದೆ. ಕ್ರೂಸ್ ಶಿಪ್ ಡೈಮಂಡ್ ಕಳೆದ ವಾರ ಜಪಾನ್ ಗೆ ಬಂದಿಳಿದಿತ್ತು ಆಡರೆ ಓರ್ವ ವ್ಯಕ್ತಿಗೆ ಕರೋನಾ ವೈರಾಣು ಸೋಂಕು ತಗುಲಿದ್ದು ಪತ್ತೆಯಾಗಿದ್ದರಿಂದ ಹಡಗಿಗೆ ನಿಬರ್ಂಧ ವಿಧಿಸಲಾಗಿತ್ತು.
ಈ ಹಡಗಿನಲ್ಲಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರೂ ಸೇರಿ 138 ಭಾರತೀಯರು ಇದ್ದರು. ಈ ಹಿನ್ನೆಲೆಯಲ್ಲಿ ಫೆ.19 ರ ವರೆಗೂ ಹಡಗಿಗೆ ನಿಬರ್ಂಧ ವಿಧಿಸಲಾಗಿದೆ. ವೈರಾಣು ಸೋಂಕು ಪೀಡಿತರನ್ನು ಹೆಚ್ಚಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.