ಬದಿಯಡ್ಕ: ನೀರ್ಚಾಲು ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ದೇವಸ್ಥಾನದ ವಾರ್ಷಿಕ ಕುಂಭ ಸಂಕ್ರಮಣ ಉತ್ಸವವು ಇಂದು (ಫೆ.13) ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಬೆಳಿಗ್ಗೆ 11ಕ್ಕೆ ನವಕಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30ರಿಂದ 7.30ರ ವರೆಗೆ ಕಾರ್ಮಾರು ಶ್ರೀಮಹಾವಿಷ್ಣು ಭಜನಾ ಸಂಘದವರಿಂದ ಭಜನೆ, 7.30ಕ್ಕೆ ಕಾರ್ತಿಕಪೂಜೆ, ರಾತ್ರಿ 8 ರಿಂದ 9.30ರ ವರೆಗೆ ಪುತ್ತೂರು ಸಹೋದರಿಯರಾದ ನಿಶಿತಾ-ದೀಕ್ಷಿತಾ ಪುತ್ತೂರು ಮತ್ತು ರಾಜ್ ಸಹೋದರರಾದ ಸಾತ್ವಿಕ್ ರಾಜ್ ಹಾಗೂ ಸಾಕೇತ್ ರಾಜ್ ಪಟ್ಟಾಜೆ ಅವರಿಂದ ನೃತ್ಯ ನಮನ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಬಳಿಕ 9.30 ರಿಂದ 1.30ರ ವರೆಗೆ ಜಾಂಬವತಿ ಕಲ್ಯಾಣ-ಅಗ್ರಪೂಜೆ ಯಕ್ಷಗಾನ ಬಯಲಾಟ ನಡೆಯಲಿದೆ.