ಕಾಸರಗೋಡು: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಕಾಸರಗೋಡು ಸರ್ಕಾರಿ ಕಾಲೇಜು ಯಕ್ಷಗಾನ ಸಂಶೋಧನ ಕೇಂದ್ರ, ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಸಂಯುಕ್ತ ಆಶ್ರಯದಲ್ಲಿ ಇಂದು(ಫೆ.12ರಂದು) ಬೆಳಗ್ಗೆ 10ರಿಂದ ಕಾಸರಗೋಡು ಸರ್ಕಾರಿ ಕಾಲೇಜು ಸಭಾ ಭವನದಲ್ಲಿ ತೆಂಕುತಿಟ್ಟು ಯಕ್ಷಗಾನದ ಪ್ರಸಿದ್ಧ ನಾಟ್ಯಗುರು ದಿ.ಕಾವು ಕಣ್ಣ ಅವರ ನೆನಪು 'ಹಿರಿಯರ ನೆನಪು' ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಂಶುಪಾಲ ಡಾ.ಎಲ್.ಅನಂತ ಪದ್ಮನಾಭ ಅಧ್ಯಕ್ಷತೆ ವಹಿಸುವರು. ಸುಳ್ಯ ನೆಹರೂ ಸ್ಮಾರಕ ಮಹಾವಿದ್ಯಾಲಯ ವಿಶ್ರಾಂತ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲ ಅವರು ದಿ.ಕಾವು ಕಣ್ಣ ಅವರ ಸಂಸ್ಮರಣಾ ಭಾಷಣ ಮಾಡುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎ.ಎನ್.ಖಂಡಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಯಕ್ಷಗಾನ ಸಂಶೋಧನಾ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ, ನಾಟ್ಯಗುರು ದಿವಾಣ ಶಿವಶಂಕರ ಭಟ್ ಶುಭ ಹಾರೈಸುವರು. ಯಕ್ಷಗಾನ ಸಂಶೋಧನಾ ಕೇಂದ್ರ ಸಂಯೋಜನಾಧಿಕಾರಿ ಡಾ.ರತ್ನಾಕರ ಮಲ್ಲಮೂಲೆ ನಿರ್ವಹಿಸುವರು.ಯಕ್ಷಗಾನ ಸಂಶೋಧನಾ ಕೇಂದ್ರ ವಕ್ತಾರೆ ಸವಿತಾ ಬಿ., ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗ ಮುಖ್ಯಸ್ಥೆ ಸುಜಾತ ಎಸ್. ಉಪಸ್ಥಿತರಿರುವರು.
11.30ರಿಂದ ಸಿರಿಚಂದನ ಕನ್ನಡ ಯುವ ಬಳಗ ಕಾಸರಗೋಡು ಅವರಿಂದ 'ವಾಲಿ ಮೋಕ್ಷ' ಯಕ್ಷಗಾನ ತಾಳಮದ್ದಳೆ ನಡೆಯಲಿದೆ.ಹಿಮ್ಮೇಳದಲ್ಲಿ ಡಾ.ಸತೀಶ್ ಪುಣಿಂಚತ್ತಾಯ ಪೆರ್ಲ, ರೋಹಿಣಿ ಎಸ್.ದಿವಾಣ, ಶ್ರೀಧರ ಎಡಮಲೆ, ಸುಧೀರ್ ಪಾಣಾಜೆ, ಮುಮ್ಮೇಳದಲ್ಲಿ ವಿ.ಜಿ.ಕಾಸರಗೋಡು, ದಿವಾಕರ ಬಲ್ಲಳ ಎ.ಬಿ., ನವೀನ ಕುಂಟಾರು, ಅನುರಾಧ ಕಲ್ಲಂಗೂಡ್ಲು, ಕಾರ್ತಿಕ್ ಪಡ್ರೆ ಸಹಕರಿಸುವರು.
ಮಧ್ಯಾಹ್ನ 2ರಿಂದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪೆÇ್ರ.ಎಂ.ಎ.ಹೆಗಡೆ ಅವರ ಜತೆ ಕಾಲೇಜು ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ ನಡೆಯಲಿದೆ.