ಬದಿಯಡ್ಕ: ಮುಖಾರಿ ಮುವಾರಿ ಸಮುದಾಯದ ರತ್ನಗಿರಿ ಶ್ರೀ ಕುದುರೆಕ್ಕಾಳಿ ಭಗವತಿ ಹಾಗೂ ಸಪರಿವಾರ ದೈವಗಳ ಕ್ಷೇತ್ರದ ಕಳಿಯಾಟ ಮಹೋತ್ಸವವು ಶುಕ್ರವಾರ ಬೆಳಗ್ಗೆ ರಕ್ತಚಾಮುಂಡಿ ದೈವದ ಕೋಲ, ಪ್ರಸಾದ ವಿತರಣೆ, ಅನ್ನದಾನ ಹಾಗೂ ಸಂಜೆ ಗುಳಿಗನ ಕೋಲದೊಂದಿಗೆ ಸಂಪನ್ನವಾಯಿತು.
ಊರಪರವೂರ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು. ಮಂಗಳವಾರ ಬೆಳಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರ ನೇತೃತ್ವದಲ್ಲಿ ಕಾರ್ಯಕ್ರಮಗಳು ಆರಂಭವಾಗಿದ್ದವು. ಬುಧವಾರ ಬೆಳಗ್ಗೆ ಶ್ರೀ ಕುದುರೆಕ್ಕಾಳಿ ಭಜನಾ ಸಂಘ ಹಾಗೂ ವೃಂದಾವನ ಭಜನಾ ಸಂಘ, ಬಾಂಜತ್ತಡ್ಕ ಭಜನಾ ಸೇವೆ ನಡೆಸಿಕೊಟ್ಟರು. ಮಧ್ಯಾಹ್ನ ಕುದುರೆಕ್ಕಾಳಿ ಭಗವತಿ (ಅಶ್ವಾರೂಢ ಪಾರ್ವತಿ)ಗೆ ತಂಬಿಲ, ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನದಾನ ನಡೆಯಿತು. ಸಂಜೆ ಬಬ್ಬರಿಯ ಕಟ್ಟೆಯಲ್ಲಿ ತಂಬಿಲ, ರಾತ್ರಿ ನೃತ್ಯ ಕಾರ್ಯಕ್ರಮ, ರಾತ್ರಿ ವಿಷ್ಣುಮೂರ್ತಿ ದೈವದ ಕುಳ್ಚಾಟ ನಡೆಯಿತು.ಗುರುವಾರ ಬೆಳಗ್ಗೆ ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಅನ್ನದಾನ, ಸಂಜೆ ರಕ್ತಚಾಮುಂಡಿ ದೈವದ ಭಂಡಾರ ತೆಗೆದು ರಾತ್ರಿ ತೊಡಂಗಲ್ ನಡೆಯಿತು. ಬಜ್ಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಮದ ಸರ್ಪಸಂಬಂಧ ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.