ಕಾಸರಗೋಡು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಪ್ಯಾರಾ ಲೀಗಲ್ ವಾಲಿಂಟಿಯರ್‍ಗಳಿಗಾಗಿ ಮೂರು ದಿಮಗಳ ತರಬೇತಿ ಜಿಲ್ಲಾ„ಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಆರಂಭಗೊಂಡಿದೆ. ಜಿಲ್ಲಾ ನ್ಯಾಯಮೂರ್ತಿ ಡಿ.ಅಜಿತ್ ಕುಮಾರ್ ಉದ್ಘಾಟಿಸಿದರು.
ಜಿಲ್ಲಾ ಸಹಾಯಕ ಸೆಷನ್ಸ್ ನ್ಯಾಯಮೂರ್ತಿ ಟಿ.ಕೆ.ನಿರ್ಮಲಾ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಜಿಲ್ಲಾಧಿಕಾರಿ ಎಲ್.ಎ.ಸಜಿ ಎಫ್.ಮೆಂಡಿಸ್, ಕಾಸರಗೋಡು ಬಾರ್ ಅಸೋಸಿಯೇಶನ್ ಕಾರ್ಯದರ್ಶಿ ನ್ಯಾಯವಾದಿ ಕರುಣಾಕರನ್ ನಂಬ್ಯಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರಾಧಿಕಾರ ಕಾರ್ಯದರ್ಶಿ, ನ್ಯಾಯಮೂರ್ತಿ ಸಿ.ಮುಜೀಬ್ ರಹಮಾನ್ ಸ್ವಾಗತಿಸಿದರು. ವಿಭಾಗ ಅಧಿಕಾರಿ ಕೆ.ದಿನೇಶ ವಂದಿಸಿದರು.