ಕಲಬುರಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಪರಿಚಯವಾಗಿರುವ ಲೇಖಕರ ಕಟ್ಟೆ ಪರಿಕಲ್ಪನೆಯ ಮೂಲಕ ಸಮ್ಮೇಳನದ ಸರ್ವಾಧ್ಯಕ್ಷರೇ ಜನರ ಮಧ್ಯೆ ಕಾಣಿಸಿಕೊಂಡು ಖುಷಿಪಟ್ಟರು, ಕನ್ನಡಾಭಿಮಾನಿಗಳನ್ನೂ ಖುಷಿಪಡಿಸಿದರು.
ಪುಸ್ತಕ ಮಳಿಗೆ ಸಾಲಿನಲ್ಲಿ ಲೇಖಕರ ಕಟ್ಟೆ ಆರಂಭಿಸಲಾಗಿದ್ದು, 20-30 ಮಂದಿ ನಿಂತುಕೊಳ್ಳಲು ಸಾಧ್ಯವಾಗುವಷ್ಟು ಸ್ಥಳಾವಕಾಶವಿರಲಿದೆ. ಇಲ್ಲಿಗೆ ಸಾಹಿತಿಗಳು, ಲೇಖಕರು ಬರಬೇಕು, ಜನರಿಗೆ ಹತ್ತಿರವಾಗಬೇಕು ಮತ್ತು ಅವರ ಪ್ರಶ್ನೆಗಳು, ಗೊಂದಲಕ್ಕೆ ಪರಿಹಾರ ನೀಡುವಂತಾಗಬೇಕೆಂಬುದು ಈ ಪರಿಕಲ್ಪನೆ ಉದ್ದೇಶ.
ಬೆಳಗ್ಗೆ ಮಹಿಳಾಗೋಷ್ಠಿ ನಡೆಯುವಾಗ ಎಚ್.ಎಸ್.ವೆಂಕಟೇಶಮೂರ್ತಿಯವರು ಪ್ರಧಾನ ವೇದಿಕೆಯಿಂದ ಇಳಿದು ಲೇಖಕರ ಕಟ್ಟೆಗೆ ಆಗಮಿಸಿದರು. ವೇದಿಕೆ ಇಳಿಯುತ್ತಿದ್ದಂತೆ ಸುತ್ತುವರಿದ ಅಭಿಮಾನಿಗಳು ಸೆಲ್ಫಿಗಳನ್ನು ತೆಗೆದುಕೊಂಡರು. ಬಳಿಕ ಲೇಖಕರ ಕಟ್ಟೆಯಲ್ಲಿ ಆಸೀನರಾಗುತ್ತಿದ್ದಂತೆ ಜನರ ಗುಂಪೇ ಅಲ್ಲಿ ಸುತ್ತುವರಿಯಿತು. ಶಾಲಾ ಮಕ್ಕಳು ಹಸ್ತಾಕ್ಷರ ಹಾಕಿಸಿಕೊಳ್ಳಲು ಪ್ರಯತ್ನಿಸಿದರು. ಯುವಕರು ಅಧ್ಯಕ್ಷರ ಫೆÇೀಟೋ ಸೆರೆಹಿಡಿದರು.
ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅವರೊಂದಿಗೆ ಕೆಲ ಸಮಯ ಕಳೆದರು. ಎಚ್?ಎಸ್?ವಿ ಅವರ ಸರಳ ವ್ಯಕ್ತಿತ್ವ ಕಂಡು ಸಾಹಿತ್ಯಾಸಕ್ತರು ಕೂಡ ಸಂತಸಗೊಂಡರು. ಇದೇ ವೇಳೆ ವಿದ್ಯಾರ್ಥಿಗಳ ಪ್ರಶ್ನೆಗಳಿಗೂ ಉತ್ತರಿಸಿ, ಸಾಹಿತ್ಯದ ಅರಿವಿನ ಮಹತ್ವವನ್ನು ತಿಳಿಸಿಕೊಟ್ಟರು.
ಈ ವೇಳೆ ಮಾತನಾಡಿದ ಅವರು ಪುಸ್ತಕದ ಮೂಲದಿಂದ ಮಾತ್ರವಲ್ಲದೇ, ಕವಿಯ ಬಾಯಿಂದಲೇ ಆತನ ವಾಣಿ, ಕೃತಿ ಹಾಗೂ ಕತೆ ಇನ್ನಷ್ಟು ಆಪ್ತವಾಗಿ ಓದುಗರಿಗೆ ತಲುಪುತ್ತದೆ ಎಂದು ಹೇಳಿದರು.