ಕಾಸರಗೋಡು: ಫುಟ್ಬಾಲ್ ಮೂಲಕ ಕೇರಳದ ಅಭಿಮಾನವಾಗಿ ಮಿಂಚಿದ್ದ ಕೆ.ಪಿ ರಾಹುಲ್ ಇನ್ನು ಮುಂದೆ ಕಾಸರಗೋಡು ಶಿಕ್ಷಣ ಉಪನಿರ್ದೇಶಕರ ಕಚೇರಿಯ ತಾರೆಯಾಗಲಿದ್ದಾರೆ. ಕೋಲ್ಕತ್ತಾದಲ್ಲಿ ನಡೆದಿದ್ದ 72ನೇ ಸಂತೋಷ್ ಟ್ರೋಫಿ ಫುಟ್ಬಾಲ್ ಪಂದ್ಯಾಟದಲ್ಲಿ ಕೇರಳವನ್ನು ಪ್ರತಿನಿಧಿಸಿ ಟ್ರೋಫಿ ಗೆದ್ದುಕೊಂಡಿದ್ದ ಹನ್ನೊಂದು ಮಂದಿ ಕ್ರೀಡಾಳುಗಳಲ್ಲಿ ಒಬ್ಬನಾಗಿರುವ ರಾಹುಲ್‍ಗೆ ಕೇರಳ ಸರ್ಕಾರ ನೀಡಿದ್ದ ಸರ್ಕಾರಿ ಉದ್ಯೋಗದ ಭರವಸೆಯನ್ನು ಈಡೇರಿಸಿದೆ. ಕಾಸರಗೋಡು ಶಿಕ್ಷಣ ಉಪ ನಿರ್ದೇಶಕರ ಕಚೇರಿಯಲ್ಲಿ ಕೊನೆಗೂ ಎಲ್.ಡಿ ಕ್ಲರ್ಕ್ ಆಗಿ ನೇಮಕಾತಿ ಪಡೆದಿರುವ ರಾಹುಲ್ ತಂದೆ ರಮೇಶ್, ತಾಯಿ ತಂಗಮಣಿ ಹಾಗೂ ಕುಟುಂಬ ಸದಸ್ಯರೊಂದಿಗೆ ಶುಕ್ರವಾರ ಕಚೇರಿಗೆ ಆಗಮಿಸಿ ಸೇವೆಗೆ ಹಾಜರಾದರು.
ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ ಹಾಗೂ ಸಿಬ್ಬಂದಿ ರಾಹುಲ್ ಅವರನ್ನು ಹೂಗುಚ್ಛ ನೀಡಿ ಬರಮಾಡಿಕೊಂಡರು. ರಾಹುಲ್ ಅವರನ್ನು ಸೂಪರ್ ನ್ಯೂಮರರಿ ಹುದ್ದೆಗೆ ಭರ್ತಿಗೊಳಿಸಲಾಗಿದೆ. ಕೋಲ್ಕತಾದಲ್ಲಿ ನಡೆದ 72ನೇ ಸಂತೋಷ್ ಟ್ರಾಫಿಯಲ್ಲಿ ಚಾಂಪಿಯನ್ ಶಿಪ್ ಪಡೆದ ಕೇರಳ ರಾಜ್ಯ ತಂಡದ 11ಮಂದಿ ಸದಸ್ಯರಿಗೂ ಅವರ ಶಿಕ್ಷಣಾರ್ಹತೆ ಪ್ರಕಾರ ಸೂಪರ್ ನ್ಯೂಮರಿ ಹುದ್ದೆಗ¼ನ್ನುಒದಗಿಸುವ ರಾಜ್ಯ ಸರಕಾರದ ಆದೇಶ ಪ್ರಕಾರರಾಹುಲ್ ಉದ್ಯೋಗ ಪಡೆದಿದ್ದಾರೆ. ಕೇರಳದ ತಾರೆಯಾಗಿ ಮಿಂಚಿರುವ ರಾಹುಲ್, ಶಿಕ್ಷಣ ಇಲಾಖೆಯ ಅಭಿಮಾನವಾಗಿ ಬೆಳಗಲಿ ಎಂದು ಡಿಡಿಇ ಕೆ.ವಿ ಪುಷ್ಪಾ ಹಾರೈಸಿದರು.
ಸಂತೋಷ್ ಟ್ರಾಫಿ ವಿಜೇತ ತಂಡದ ಸದಸ್ಯರಿಗೆ ಉದ್ಯೋಗ ಒದಗಿಸುವ ಭರವಸೆಯನ್ನು ಸರಕಾರ ಈಡೇರಿಸಿರುವ ಬಗ್ಗೆ ಅತೀವ ಸಂತೋಷವಿದೆ. ತಮ್ಮ ಕ್ರೀಡಾ ಚಟುವಟಿಕೆಗೆ ಈ ಉದ್ಯೋಗ ಎಂದಿಗೂ ತಡೆಯಾಗದು ಎಂದು ರಾಹುಲ್ ಈ ಸಂದರ್ಭ ತಿಳಿಸಿದರು. ಗೋಕುಲಂ ಎಫ್.ಸಿ.ಯಲ್ಲಿ ರಾಹುಲ್ ಆಟವಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಅನೇಕ ರಾಷ್ಟ್ರೀಯ ಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸಿರುವ ರಾಹುಲ್ ಅವರು ತಮ್ಮ 6ನೇ ತರಗತಿಯಲ್ಲೇ ಫುಟ್ ಬಾಲ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. 7 ನೇತರಗತಿ ವರೆಗೆ ಜಿಲ್ಲೆಯ ಪಿಲಿಕೋಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಹತ್ತನೇ ತರಗತಿ ವರೆಗೆ ಉದಿನೂರು ಸರ್ಕಾರಿಹೈಯರ್ ಸೆಕೆಂಡರಿ ಶಾಲೆಯಲ್ಲಿ, ಹೈಯರ್ ಸೆಕೆಂಡರಿ ಶಿಕ್ಷಣವನ್ನು ಮಲಪ್ಪುರಂ ಎಂ.ಎಸ್.ಪಿ.ಯಲ್ಲಿ ಪಡೆದಿದ್ದಾರೆ. ನಂತರ ಕೋಟಯಂ ಬಸೇಲಿಯಸ್‍ಕಾಲೇಜಿನಲ್ಲಿ ಪದವಿ ತರಗತಿಗೆ ಸೇರಿದ್ದರೂ, ಫುಟ್ ಬಾಲ್ ಪಂದ್ಯಗಳಲ್ಲಿ ಭಾಗವಹಿಸುವ ಬಿರುಸಿನ ನಡುವೆ ಶಿಕ್ಷಣ ಅರ್ಧದಲ್ಲೇ ಮೊಟಕುಗೊಂಡಿತ್ತು. ಪಿಲಿಕೋಡ್ ಮೂಲನಿವಾಸಿಯಾಗಿರುವ ರಾಹುಲ್ ಪ್ರಸಕ್ತ ಚೀಮೇನಿ ಮುಡ್ಯಡ್ಕದಲ್ಲಿ ವಾಸವಾಗಿದ್ದಾರೆ. ಸಹೋದರಿ ರಸ್ನಾ ದ್ವಿತೀಯ ಪದವಿ ವಿದ್ಯಾರ್ಥಿನಿಯಾಗಿದ್ದಾರೆ.