HEALTH TIPS

ಕೃಷಿ ಮೇಳಕ್ಕೆ ಸಜ್ಜುಗೊಂಡ ನಾಲಂದ-ಸಿದ್ಧತೆ ಪೂರ್ಣ

   
        ಪೆರ್ಲ: ಪೆರ್ಲ ನಾಲಂದ ಮಹಾವಿದ್ಯಾಲಯ, ಕ್ಯಾಂಪೆÇ್ಕೀ ಲಿಮಿಟೆಡ್, ಮಂಗಳೂರು ಹಾಗೂ ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ನ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಇಂದು(ಫೆ. 8) ಪೆರ್ಲ ನಾಲಂದ ಕಾಲೇಜು ಆವರಣದಲ್ಲಿ ಬೃಹತ್ 'ಕೃಷಿ ಮೇಳ' ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಭರದ ಸಿದ್ಧತೆ ನಡೆಯುತ್ತಿದೆ.
        ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಕೃಷಿ ಮೇಳನ್ನು ಉತ್ತಮ ರೀತಿಯಲ್ಲಿ ನಡೆಸಲು ಸಂಘಟಕರು, ಆಡಳಿತ ಮಂಡಳಿ, ಉಪನ್ಯಾಸಕ ವೃಂದ, ಎನ್ನೆಸ್ಸೆಸ್ ಘಟಕ, ಕಾಲೇಜು ಯೂನಿಯನ್, ವಿದ್ಯಾರ್ಥಿಗಳು ಶ್ರಮಿಸುತ್ತಿದ್ದು, ಉತ್ಪನ್ನಗಳ, ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟಕ್ಕೆ, ವಿಚಾರ ಗೋಷ್ಠಿಗಳಿಗೆ ಆವಶ್ಯಕವಾದಂತಹ ಸಿದ್ಧತೆಗಳು ನಡೆದಿದ್ದು, ಕೃಷಿಕರನ್ನು ಬರಮಾಡಿಕೊಳ್ಳಲ್ಲು ನಾಲಂದ ಕಾಲೇಜು ಸಜ್ಜುಗೊಳ್ಳುತ್ತಿದೆ. ಕೃಷಿ ಮೇಳದ ಭಾಗವಾಗಿ ಅಡಿಕೆ ಕೃಷಿಯಲ್ಲಿ ಆಧುನಿಕತೆ, ಕೊಕ್ಕೊ ಕೃಷಿ ಸವಾಲುಗಳು, ಕೈತೋಟ ಕೃಷಿಯಲ್ಲಿ ಮಹಿಳೆಯರ ಪಾತ್ರ, ಸಾವಯವ ಕೃಷಿ ಪದ್ಧತಿ ಎಂಬ ವಿಷಯಗಳ ಬಗ್ಗೆ ವಿಚಾರ ಗೋಷ್ಠಿ ನಡೆಯಲಿದೆ.
      ವಿನೂತನ ಶೈಲಿಯ ಕೃಷಿ ಯಂತ್ರೋಪಕರಣಗಳು, ಅಡಿಕೆ ಸುಲಿಯುವ ಯಂತ್ರ, ಕಾಳುಮೆಣಸು ಬೇರ್ಪಡಿಸುವ ಯಂತ್ರ, ಏಣಿಗಳು, ಜಲ ಮರುಪೂರಣ ಸಾಧನಗಳು, ನರ್ಸರಿಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಸಾವಯವ ಗೊಬ್ಬರಗಳು, ಖಾದಿ ಹಾಗೂ ಇತರ ಬಟ್ಟೆ ಬರೆಗಳು, ಜನೌಷಧಿ , ಆಯುರ್ವೇದಿಕ್ ಔಷಧಿ, ಔಷಧೀಯ ಸಸ್ಯಗಳು, ಗೃಹ ಉಪಯೋಗಿ ಸಾಮಾಗ್ರಿಗಳು, ಪುಸ್ತಕ ಭಂಡಾರ, ವಿಶಿಷ್ಟ ರೀತಿಯ ತಿಂಡಿ ತಿನಿಸುಗಳ, ನೈಸರ್ಗಿಕ ಐಸ್ ಕ್ರೀಮ್, ಹಾಲಿನ ಉತ್ಪನ್ನಗಳು, ಅಡಿಕೆ ಹಾಗೂ ತೆಂಗು ಸಂಶೋಧನಾ ಕೇಂದ್ರ ಕೇಂದ್ರಗಳಿಂದ ಉತ್ಪನ್ನ, ಅಡಿಕೆ ಮರವೇರುವ ಯಂತ್ರ, ನಾನಾ ರೀತಿಯ ಸ್ಪ್ರೇಯರ್ಸ್, ಕಸದಿಂದ ರಸ ಉತ್ಪತ್ತಿಸುವ ಯಂತ್ರಗಳು, ತರಕಾರಿ ಬೀಜಗಳು, ವಾಹನಗಳು, ಪಾನೀಯಗಳು ಹಾಗೂ ಇನ್ನಿತರ 90ಕ್ಕೂ ಮಿಕ್ಕ ವೈವಿಧ್ಯಮಯ ಮಳಿಗೆಗಳು ಕೃಷಿಕರಿಗೆ ವಿಶೇಷ ಆಕರ್ಷಣೆಯನ್ನು ನೀಡಲಿವೆ.
    ಇದರೊಂದಿಗೆ ಸ್ಥಳೀಯ ಉತ್ತಮ ಕೃಷಿ ಉತ್ಪನ್ನಗಳ ಪ್ರದರ್ಶನ ನಡೆಯಲಿದ್ದು, ಉತ್ತಮ ಉತ್ಪನ್ನಗಳ ಪ್ರದರ್ಶನಕ್ಕೆ ಬಹುಮಾನ ವಿತರಣೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries