ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಗುರುವಾರ ಸಂಜೆ ಮಹಿಷಮರ್ದಿನಿ ಮಾತೃಮಂಡಳಿ ಗೋಸಾಡ ಇದರ ಸದಸ್ಯರಿಂದ ಶ್ರೀದೇವರಿಗೆ ನೈವೇದ್ಯ ಸಮರ್ಪಣೆಗಿರುವ ಪಾತ್ರೆಗಳನ್ನು ಕೊಡುಗೆ ರೂಪದಲ್ಲಿ ನೀಡಲಾಯಿತು. ಇದೇ ವೇಳೆ ಸ್ಥಳೀಯ ಮುಸ್ಲಿಂ ಮತಬಾಂಧವರಾದ ಇಬ್ರಾಹಿಂ ಚೆರುಣಿ ಮತ್ತು ಕುಟುಂಬದವರು ಶ್ರೀ ಕ್ಷೇತ್ರಕ್ಕೆ ಹತ್ತು ಕ್ವಿಂಟಾಲ್ ಅಕ್ಕಿಯನ್ನು ದಾನವಾಗಿ ನೀಡಿ ಮತಸೌಹಾರ್ದತೆ ಮೆರೆದು ಶ್ರೀದೇವರ ಕೃಪೆಗೆ ಪಾತ್ರರಾದರು. ಶುಕ್ರವಾರ ಬೆಳಗಿನ ಮೊದಲ ಭಜನಾ ಕಾರ್ಯಕ್ರಮ ಶ್ರೀಕೃಷ್ಣಾ ಭಜನಾ ಸಂಘ ಮವ್ವಾರು ಇದರಿಂದ ನಡೆಯಿತು.
ಶುಕ್ರವಾರ ಬೆಳಗ್ಗೆ 9:45ಕ್ಕೆ ಪಾವೂರು ಧೂಮಾವತಿ ದೈವಸ್ಥಾನದಿಂದ ಹೊರಟ ಭಂಡಾರವು ಶ್ರೀ ಕ್ಷೇತ್ರವನ್ನು ತಲುಪಿತು. ನಂತರದ ಭಜನಾ ಸಂಕೀರ್ತನೆ ಧರ್ಮಶಾಸ್ತಾ ಭಜನಾಸಂಘ ಕುರುಮುಜಿಕಟ್ಟೆ ಇದರ ಸದಸ್ಯರಿಂದ ನಡೆಯಿತು.
ಬೆಳಗ್ಗೆ ಹತ್ತುಗಂಟೆಯ ನಂತರ ನಾರಂಪಾಡಿ ಶ್ರೀ ಉಮಾಮಹೇಶ್ವರಿ ಕ್ಷೇತ್ರ, ಗೋಸಾಡ ಮುಚ್ಚಿಲೋಟ್ ತರವಾಡು ಮತ್ತು ನೆಕ್ರಾಜೆ ತರವಾಡು ಎಂಬೀ ಕಡೆಗಳಿಂದ ಹಸಿರುವಾಣಿ ಹೊರೆಕಾಣಿಕೆ ವಾದ್ಯಘೋಷ ಸಮೇತ ಹೊರಟು ಶ್ರೀಕ್ಷೇತ್ರವನ್ನು ತಲುಪಿತು. ಸಂಜೆ ವೇಳೆಗೆ ಫ್ರೆಂಡ್ಸ್ ಆಟ್ರ್ಸ್&ಸ್ಪೋಟ್ರ್ಸ್ ಕ್ಲಬ್, ಮುಕ್ಕೂರು ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಗಲ್ಪಾಡಿಯಿಂದಲೂ ಹೊರೆಕಾಣಿಕೆ ಮೆರವಣಿಗೆ ಕ್ಷೇತ್ರಪರಿಸರವನ್ನು ತಲುಪಿದವು.
ಇಂದಿನ ಕಾರ್ಯಕ್ರಮಗಳು:
ಫೆ.8ರಂದು ವೈದಿಕ ಕಾರ್ಯಕ್ರಮ, ಸಂಜೆ ದುರ್ಗಾನಮಸ್ಕಾರ ಪೂಜೆ, ಅಂಕುರ ಪೂಜೆ, ಸಂಜೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ರವೀಂದ್ರ ರೈ ಗೋಸಾಡ ಅಧ್ಯಕ್ಷತೆ ವಹಿಸುವರು. ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡುವರು. ಮುಖ್ಯ ಅತಿಥಿಗಳಾಗಿ ಗೋಪಿನಾಥನ್ ನಾಯರ್, ಡಾ. ಭಾಸ್ಕರ ರಾವ್ ಅಡೂರು, ಡಾ. ಶ್ರೀನಿಧಿ ಸರಳಾಯ, ಸುರೇಶ್ ಕುಮಾರ್ ಶೆಟ್ಟಿ, ಹರಿನಾರಾಯಣ ಎಸ್. ಉಪಸ್ಥಿತರಿರುವರು. ಒ.ಎಸ್.ಸತೀಶ್ ಕೊಡಕ್ಕರ ಧಾರ್ಮಿಕ ಭಾಷಣ ಮಾಡುವರು. ಗಣ್ಯರು ಉಪಸ್ಥಿತರಿರುವರು. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ತಿರುವಾದಿರ, ಯಕ್ಷಗಾನ ಬಯಲಾಟ, ಕರ್ನಾಟಕ ಶಾಸ್ತ್ರೀಯ ಸಂಗೀತ, ನೃತ್ಯ ವೈವಿಧ್ಯ, ಮಿಮಿಕ್ರಿ, ತುಳು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.