ಮಂಜೇಶ್ವರ: ಕನಿಲ ಶ್ರೀಭಗವತಿ ಆಂಗ್ಲ ಮಾಧ್ಯಮ ಶಾಲೆಯ ನೂತನ ವಿಸ್ಕøತ ಕಟ್ಟಡದ ಉದ್ಘಾಟನೆ ಬುಧವಾರ ನಡೆಯಿತು.
ಕನಿಲ ಶ್ರೀಭಗವತಿ ಕ್ಷೇತ್ರದ ಮಾಣಿಞÂ ಅತ್ತಾರರು, ಟಿ.ಲಕ್ಷ್ಮಣ್ ಸಾಲ್ಯಾನ್, ಮಹಮ್ಮದ್ ಹಾರೀಸ್ ನೂತನ ಕಟ್ಟಡಗಳನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮಂಜಪ್ಪ ಕಾರ್ನವರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಜೊತೆಗೆ ಕಟ್ಟಡ ನಿರ್ಮಾಣದಲ್ಲಿ ನೆರವು ನಿಡಿದ ದಾನಿಗಳನ್ನು ಸನ್ಮಾನಿಸಿದರು. ಲಕ್ಷ್ಮಣ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಸಮಿತಿ ಸದಸ್ಯರು, ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಡಪ್ಪರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಚಾಲಕ ದಯಾನಂದ ಎಂ. ವಂದಿಸಿದರು. ಶಿಕ್ಷಕಿ ರಮ್ಯಾ ಎ. ಕಾರ್ಯಕ್ರಮ ನಿರೂಪಿಸಿದರು.