ಕಾಸರಗೋಡು: ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ವಿಶ್ವ ಕ್ಯಾನ್ಸರ್ ವಿರುದ್ಧ ದಿನಾಚರಣೆ ಚೆರ್ಕಳಮಾರ್ತೋಮಾ ಸಭಾಂಗಣದಲ್ಲಿ ಮಂಗಳವಾರ ಜರುಗಿತು. ಕಾರ್ಯಕ್ರಮ ಅಂಗವಾಗಿ ಜನಜಾಗೃತಿ, ವಿಚಾರ ಸಂಕಿರಣ ಆಯೋಜಿಸಲಾಗಿತ್ತು. ಜನಜಾಗೃತಿಗೆ ಆದ್ಯತೆ ನಿಡುವ ಮೂಲಕ ವಿಶ್ವ ಕ್ಯಾನ್ಸರ್ ವಿರುದ್ಧ ದಿನಾಚರಣೆ ನಡೆಸಲಾಗುತ್ತಿದೆ. ಔಷಧದ ಶಕ್ತಿ ಮತ್ತು ವೈದ್ಯರ ಪರಿಣತಿಗಿಂತಲೂ ಸಮಾಜದ ಬೆಂಬಲ ಈ ನಿಟ್ಟಿನಲ್ಲಿ ಅಧಿಕ ಪರಿಣಾಮಕಾರಿ ಎಂದು ಸಮಾರಂಭದಲ್ಲಿ ಅಭಿಪ್ರಾಯಪಡಲಾಯಿತು.
ಚೆಂಗಳ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಶಾಂತಾಕುಮಾರಿ ಟೀಚರ್ ಸಮಾರಂಭ ಉದ್ಘಾಟಿಸಿದರು. ಸದಸ್ಯೆ ಸುಫೈಝಾ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿಕರಿ ಡಾ.ಷಮೀಮಾ ತನ್ವೀರ್, ಹೆಲ್ತ್ ಇನ್ಸ್ ಪೆಕ್ಟರ್ ಬಿ.ಅಶ್ರಫ್ ವಿವಿಧ ವಿಷಯಗಳಲ್ಲಿ ಉಪನ್ಯಾಸನೀಡಿದರು. ಕ್ಯಾನ್ಸರ್ ನಿಂದ ಮುಕ್ತಿಪಡೆದ ಇಸ್ಮಾಯಿಲ್ ಇಜಾಸ್ ಅವರು ತಮ್ಮ ಅನುಭವ ಹಂಚಿಕೊಂಡರು. ಗ್ರಾಮಪಂಚಾಯಿತಿ ಸದಸರಾದ ತಾಹಿರ್, ಜನಾರ್ದನನ್, ಕಿರಿಯ ಆರೋಗ್ಯಾಧಿಕಾರಿಗಳಾದ ಜಲಜಾ, ಕೊಚ್ಚುರಾಣಿ, ನಿಷಾ, ಆಶಾ ಮೋಳ್,ಸಬೀನಾ, ಮಂಜೂಷಾರಾಣಿ, ಪಾಲಿಯೇಟಿವ್ ನರ್ಸ್ ರಾಧಾಮಣಿ ಮೊದಲಾದವರು ಉಪಸ್ಥಿತರಿದ್ದರು.