ಮುಳ್ಳೇರಿಯ: ಆದೂರು ಗ್ರಾಮದ ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರ ಹಾಗೂ ಮಿಂಚಿಪದವು ಶ್ರೀ ಕಾವೇರಿಯಮ್ಮ ಮಹಾಲಿಂಗೇಶ್ವರ ಕ್ಷೇತ್ರದ ಹೃದಯ ಭಾಗದಲ್ಲಿರುವ ಉಜಿರುಪಾದೆಯಲ್ಲಿ ಶ್ರೀ ರಾಜನ್ ಗುಳಿಗ ದೈವದ ಬನದಲ್ಲಿ ಗುಳಿಗ ದೈವದ ಪುನರ್ ಪ್ರತಿಷ್ಠಾ ಕಾರ್ಯಕ್ರಮವು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ಮಂಗಳವಾರ ನಡೆಯಿತು.
ಗಣಪತಿ ಹೋಮ, ಸುದರ್ಶನ ಹೋಮ, ಶ್ರೀ ರಾಜನ್ ಗುಳಿಗ ದೈವದ ಕೋಲದೊಂದಿಗೆ ಪ್ರತಿಷ್ಠೆ, ಪ್ರಸಾದ ವಿತರಣೆ ನಡೆಯಿತು. ಮಾಯಿಲಂಕೋಟೆ ಎಂ.ಸೀತಾರಾಮ ಭಟ್, ನ್ಯಾಯವಾದಿ ಎಂ.ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.