ಕಾಸರಗೋಡು: ಹೊನ್ನೆಮೂಲೆ ಶ್ರೀ ಮಲ್ಲಿಕಾರ್ಜುನ ದೇವರ ನೂತನ ಶಿಲಾಮಯ ಕ್ಷೇತ್ರ ನಿರ್ಮಾಣ ಕಾರ್ಯದ ಪ್ರಯುಕ್ತ ಫೆ.20 ರಂದು ಬೆಳಗ್ಗೆ ಶುಭಮುಹೂರ್ತದಲ್ಲಿ ಎಡನೀರು ಮಠದ ಗುರುವರ್ಯರಾದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಹಸ್ತದಿಂದ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಕಾರ್ಮಿಕತ್ವದಲ್ಲಿ ಹಾಗು ವಾಸ್ತು ಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ ಅವರ ನಿರ್ದೇಶನದಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಜರಗಿತು.
ಈ ಶುಭ ಸಂದರ್ಭದಲ್ಲಿ ಕ್ಷೇತ್ರ ಟ್ರಸ್ಟಿ ಅಧ್ಯಕ್ಷರಾದ ಡಾ.ಅನಂತ ಕಾಮತ್, ಕಾರ್ಯದರ್ಶಿ ಲೋಕೇಶ್ ಅಣಂಗೂರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಂ ಪ್ರಸಾದ್, ಕಾರ್ಯಾಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ, ಕಾರ್ಯದರ್ಶಿ ರೋಹಿತ್, ಗೌರವಾಧ್ಯಕ್ಷ ಗೋಪಾಲ ಹಾಗು ನೂರಾರು ಭಕ್ತರು ಭಾಗವಹಿಸಿದರು.