ಕುಂಬಳೆ: ಏಪ್ರಿಲ್ 10, 11, 12 ರಂದು ಅನಂತಪುರದಲ್ಲಿ ನಡೆಯುವ ರಾಷ್ಟ್ರೀಯ ಕನ್ನಡ ಸಿರಿ ಸಮ್ಮೇಳನದ ಬೆಂಗಳೂರು ಸಮಿತಿ ರಚನಾ ಸಭೆಯು ಮಂಗಳವಾರ ಬೆಂಗಳೂರಿನ ಉಪ್ಪಾರ ಪೇಟೆ ಹೋಟೆಲ್ ಸ್ವಾಗತ್ ನಲ್ಲಿ ನಡೆಯಿತು.
ಗೌರವ ಸಲಹೆಗಾರರಾಗಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ, ದೊಡ್ಡರಂಗೇಗೌಡ, ಗೌರವ ಅಧ್ಯಕ್ಷರಾಗಿ ಪುರುಷೋತ್ತಮ ಚೆಂಡ್ಲ, ಅಧ್ಯಕ್ಷರಾಗಿ ಡಾ. ಕೆ ಎನ್ ಅಡಿಗ ಅಡೂರು, ಉಪಾಧ್ಯಕ್ಷರಾಗಿ ಚಂದ್ರಹಾಸ ಎಸ್, ಎನ್ನೇಬಿ ಮೊಗ್ರಾಲ್‍ಪುತ್ತೂರು, ಉದಯ ಧರ್ಮಸ್ಥಳ, ರಾಮಚಂದ್ರ ಸೂರಂಬೈಲು, ದಯಾನಂದ ಕೆ.ಬಿ. ಕುಂಬಳೆ, ವಿಜಯಕುಮಾರ್ ಕುಲಶೇಖರ, ಸುಂದರ್ ರಾಜ್ ರೈ, ಮಂಜುನಾಥ ಅಡಪ, ಭರತ್ ಸೌಂದರ್ಯ, ಜಯಂತ್ ರಾವ್,ಪ್ರಧಾನ ಕಾರ್ಯದರ್ಶಿಯಾಗಿ ರಾಜಾರಾಮ್ ಶೆಟ್ಟಿ ಉಪ್ಪಳ, ಕಾರ್ಯದರ್ಶಿಗಳಾಗಿ ಉಷಾ ಬೆಂಗಳೂರು, ಶಾಂತರಾಮ್ ಶೆಟ್ಟಿ, ಸಂಚಾಲಕರಾಗಿ ಸತೀಶ ಅಗಪಾಲ್, ಭರತ್ ಕರವೇ, ಆಶಾನಂದ ಕುಲಶೇಖರ, ಎಲ್ ಸುಧಾ ಬೆಂಗಳೂರು, ಪಿ ಉಪೇಂದ್ರ ಶೆಟ್ಟಿ, ಪಲ್ಲಿ ವಿಶ್ವನಾಥ ಶೆಟ್ಟಿ, ರಾಜ್ ಸಂಪಾಜೆ, ಕಾಂತಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಚೆನ್ನಕೇಶವಮೂರ್ತಿ ಬೆಂಗಳೂರು, ಪದ ದೇವರಾಜ್, ಮಂಜುನಾಥ್ ಎನ್ ಬೆಂಗಳೂರು. ಮತ್ತು 50 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕನ್ನಡಸಿರಿ ಸಮ್ಮೇಳನದ ಸಂಚಾಲಕ ಜೋಗಿಲ ಸಿದ್ದರಾಜು ಅವರು ದಿಕ್ಸೂಚಿ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ ಕಾಸರಗೋಡು ಸಮ್ಮೇಳನದ ವಿವರಣೆಗಳನ್ನು ನೀಡಿದರು. ಡಾ. ರಾಜೇಶ್ ಆಳ್ವ ಬದಿಯಡ್ಕ ಸ್ವಾಗತಿಸಿ, ನಿರೂಪಿಸಿದರು.