ಕಾಸರಗೋಡು: ಕೂಡ್ಲು ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಫೆಬ್ರವರಿ 25ರಿಂದ ಆರಂಭಗೊಳ್ಳಲಿರುವ ಬ್ರಹ್ಮಕಲಶೋತ್ಸವ, ಅತಿರುದ್ರ ಮಹಾಯಾಗದ ಅಂಗವಾಗಿ ಪರಕ್ಕಿಲದಲ್ಲಿ ನಡೆಸಲಾದ ತರಕಾರಿ ಕೃಷಿಯ ಕೊಯ್ಲು ಉತ್ಸವ ಇತ್ತೀಚೆಗೆ ಜರುಗಿತು.
ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಪರಕ್ಕಿಲದಲ್ಲಿ ತರಕಾರಿ ಕೃಷಿ ನಡೆಸಲಾಗಿತ್ತು. ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕೋಟೆಕಣಿ, ಸಂಚಾಲಕ ಮೋಹನ್ ನಾಯ್ಕ್, ಚಂದ್ರಹಾಸ ಮಾಸ್ಟರ್, ಪ್ರಚಾರ ಸಮಿತಿ ಅಧ್ಯಕ್ಷ ಲೋಕೇಶ್ ಮೀಪುಗುರಿ, ಟ್ರಸ್ಟಿ ಅಧ್ಯಕ್ಷ ಡಾ. ಜಯಪ್ರಕಾಶ್, ಮಾತೃ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.