ಕಾಸರಗೋಡು: ಕೋಲ್ಕತ್ತದ ಡಂ ಡಂ ರಸ್ತೆಯ ರವೀಂದ್ರ ಭವನ ಆಡಿಟೋರಿಯಂನಲ್ಲಿ ನಡೆದ ಕೋಲ್ಕತ್ತದ ಇಂಡಿಯನ್ ಇನ್‍ಸ್ಟಿ ಟ್ಯೂ ಟ್ ಆಫ್ ಓರಿಯಂಟಲ್ ಹೆರಿಟೇಜ್ ಸಂಸ್ಥೆಯ 43 ನೇ ವಾರ್ಷಿಕ ಅಂತಾರಾಷ್ಟ್ರೀಯ `ಓರಿಯಂಟಲ್ ಹೆರಿಟೇಜ್' ಸಮಾವೇಶದಲ್ಲಿ ಡಾ.ಶ್ಯಾಮಲಾ ಪ್ರಸಾದ್ ಅವರಿಗೆ `ಲಾರ್ಡ್ ಧನ್ವಂತರಿ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಆಯುರ್ವೇದ ಶಾಸ್ತ್ರದಲ್ಲಿನ ಕೆಲಸಕ್ಕಾಗಿ ನೀಡಲಾದ ಪ್ರಶಸ್ತಿಯನ್ನು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಹೆರಿಟೇಜ್ ಸಂಸ್ಥೆಯ ಚೆಯರ್‍ಮೇನ್ ಪೆÇ್ರ.ಡಾ.ರಾಮಕೃಷ್ಣ ಶಾಸ್ತ್ರಿ ಅವರು ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಪೆÇ್ರ.ಡಾ.ಗೋಪ ಶಾಸ್ತ್ರಿ ಪ್ರಧಾನ ಕಾರ್ಯದರ್ಶಿ ಡಾ.ಅಮಲ್ ಕೃಷ್ಣ ಶಾಸ್ತ್ರಿ, ಉಪಾಧ್ಯಕ್ಷ ಡಾ.ರವೀಂದ್ರನಾಥ್ ಭಟ್ಟಾಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ `ಆಯುರ್ವೇದಾಚಾರ್ಯ' ಎಂಬ ಬಿರುದನ್ನು ನೀಡಲಾಯಿತು.