ಮುಳ್ಳೇರಿಯ: ಅಡೂರು ಪದಿಕಾಲಡ್ಕ ಶ್ರೀ ಐವರ್ ಮಹಾವಿಷ್ಣು ತಂಪುರಾಟ್ಟಿ ದೈವಸ್ಥಾನದ ಬ್ರಹ್ಮಕಲಶ ಕಳಿಯಾಟ ಮಹೊತ್ಸವದ ಆಮಂತ್ರಣ ಪತ್ರಿಕೆಯ ಉದ್ಘಾಟನಾ ಕಾರ್ಯಕ್ರಮವನ್ನು ದೇಲಂಪಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಎ.ಮುಸ್ತಫ ಹಾಜಿ ಅವರು ಗ್ರಾಮೀಣ ಬ್ಯಾಂಕ್ ನಿವೃತ್ತ ಪ್ರಬಂಧಕ ಕೃಷ್ಣ ಸರಳಾಯರಿಗೆ ನೀಡಿ ಭಾನುವಾರ ಉದ್ಘಾಟಿಸಿದರು.
ಮಾರ್ಚ್ 24 ರಿಂದ 29 ರವರೆಗೆ ಬ್ರಹ್ಮಕಲಶ ಮತ್ತು ಕಳಿಯಾಟ ಮಹೋತ್ಸವ ನಡೆಯಲಿದೆ. ಕಾರ್ಯಕ್ರಮದಂಗವಾಗಿ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಭದಲ್ಲಿ ಸಮಿತಿಯ ಅಧ್ಯಕ್ಷ ಎ.ಪಿ. ಕುಶಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರಡ್ಕ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಸಿ.ಕೆ.ಕುಮಾರನ್, ಗ್ರಾಮ ಪಂಚಾಯತಿ ಸದಸ್ಯರಾದ ರತನ್ ಕುಮಾರ್ ನಾಯಕ್, ಗಂಗಾಧರ ಕಾಂತಡ್ಕ, ನಂದಕುಮಾರ್ ಪಾಂಡಿ, ಕುಮಾರನ್ ಕಾರ್ನವರ್, ಎ.ಸಿ.ರಾಮಚಂದ್ರನ್ ಮಣಿಯಾಣಿ, ಎ.ಚಂದ್ರಶೇಖರನ್, ರಾಮುಞï ಚೀನಾಡಿ, ಚಿರುಕಂಡನ್ ಪಾರಕಡವ್, ಪ್ರಭಾಕರ ನಾಯಕ್,
ಟಿ.ಕೆ.ದಾಮೋದರನ್, ಕೇರಳ ತುಳು ಅಕಾಡೆಮಿ ಸದಸ್ಯ ರವೀಂದ್ರ ರೈ ಮಾಲ್ಲಾವರ ಅಪ್ಪಕುಂಞÂ ಮಾಸ್ತರ್ ಮೊದಲಾದವರು ಮಾತನಾಡಿದರು. ಸಮಿತಿ ಕಾಯ9ದಶಿ9 ಬಿಜು ನೆಚ್ಪಡ್ಪು ಸ್ವಾಗತಿಸಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಧನಂಜಯನ್ ಅಡೂರು ವಂದಿಸಿದರು.