ಬದಿಯಡ್ಕ: ಮುಖಾರಿ ಮುವಾರಿ ಸಮುದಾಯದ ರತ್ನಗಿರಿ ಶ್ರೀ ಕುದುರೆಕ್ಕಾಳಿ ಭಗವತಿ ಹಾಗೂ ಸಪರಿವಾರ ದೈವಗಳ ಕ್ಷೇತ್ರದ ಕಳಿಯಾಟ ಮಹೋತ್ಸವವು ಇಂದಿನಿಂದ(ಫೆ.25ರಿಂದ) ಫೆ.28ರ ತನಕ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳವರ ನೇತೃತ್ವದಲ್ಲಿ ಜರಗಲಿರುವುದು.
ಇಂದು ಪೂರ್ವಾಹ್ನ ಗಣಪತಿ ಹೋಮ, ಶುದ್ಧಿಕಲಶ, ಪ್ರತಷ್ಠಾ ದಿನ - ಆಚರಣೆ, 10 ಗಂಟೆಗೆ ನೀರ್ಚಾಲು ಅಶ್ವತ್ಥ ಕಟ್ಟೆಯಿಂದ ರತ್ನಗಿರಿ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, 11.30ರಿಂದ ತುಲಾಭಾರ ಸೇವೆ, ಪೂಜೆ, ಪ್ರಸಾದ ವಿತರಣೆ, ಅನ್ನದಾನ. ಫೆ.26ರಂದು ಬೆಳಗ್ಗೆ 8.30ರಿಂದ ಶ್ರೀ ಕುದುರೆಕ್ಕಾಳಿ ಭಜನಾ ಸಂಘದವರಿಂದ ಭಜನೆ, 10 ಗಂಟೆಯಿಂದ ವೃಂದಾವನ ಭಜನಾ ಸಂಘ, ಬಾಂಜತ್ತಡ್ಕ ಇವರಿಂದ ಭಜನೆ, 11.30ರಿಂದ ಕುದುರೆಕ್ಕಾಳಿ ಭಗವತಿ (ಅಶ್ವಾರೂಢ ಪಾರ್ವತಿ)ಗೆ ತಂಬಿಲ, ಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನದಾನ, ಸಂಜೆ 4 ಗಂಟೆಗೆ ಬಬ್ಬರಿಯ ಕಟ್ಟೆಯಲ್ಲಿ ತಂಬಿಲ, ರಾತ್ರಿ 7.30ರಿಂದ ನೃತ್ಯ ಕಾರ್ಯಕ್ರಮ, 9 ಗಂಟೆಗೆ ವಿಷ್ಣುಮೂರ್ತಿ ದೈವದ ಭಂಡಾರ ತೆಗೆಯುವುದು, 10 ಗಂಟೆಯಿಂದ ವಿಷ್ಣುಮೂರ್ತಿ ದೈವದ ಕುಳ್ಚಾಟ. ಫೆ.27ರಂದು ಬೆಳಗ್ಗೆ 10ರಿಂದ ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 7.30ಕ್ಕೆ ರಕ್ತಚಾಮುಂಡಿ ದೈವದ ಭಂಡಾರ ತೆಗೆಯುವುದು, ರಾತ್ರಿ 9ಕ್ಕೆ ತೊಡಂಗಲ್, 9.30ಕ್ಕೆ ಬಜ್ಪೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯವರಿಂದ ಸರ್ಪಸಂಬಂಧ ಎಂಬ ತುಳು ಯಕ್ಷಗಾನ ಬಯಲಾಟ, ಫೆ.28ರಂದು ಶುಕ್ರವಾರ ಬೆಳಗ್ಗೆ 10ರಿಂದ ರಕ್ತ ಚಾಮುಂಡಿ ದೈವದ ಕೋಲ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನದಾನ, ಸಂಜೆ 3 ಗಂಟೆಯಿಂದ ಗುಳಿಗನ ಕೋಲ, ಪ್ರಸಾದ ವಿತರಣೆ ನಡೆಯಲಿದೆ.