ಕಾಸರಗೋಡು: ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಮರು ಆಯ್ಕೆಯಾದ ನ್ಯಾಯವಾದಿ ಕೆ.ಶ್ರೀಕಾಂತ್ ಅವರಿಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಕೋಟಿಕುಳದಿಂದ ಆರಂಭಿಸಿದ ಸ್ವಾಗತ ಮೆರವಣಿಗೆ ತೃಕ್ಕನ್ನಾಡಿನಲ್ಲಿ ಸಂಪನ್ನಗೊಂಡಿತು. ಆ ಬಳಿಕ ನಡೆದ ಸಭೆಯಲ್ಲಿ ಉದುಮ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ಬಾಬುರಾಜ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಮೀಡಿಯಾ ಸೆಲ್ ಸಂಚಾಲಕ ವೈ.ಕೃಷ್ಣದಾಸ್, ಉದುಮ ಮಂಡಲ ಉಪಾಧ್ಯಕ್ಷ ತಂಬಾನ್ ಅಚ್ಚೇರಿ, ಯುವಮೋರ್ಚಾ ಜಿಲ್ಲಾ ಸೇವಾ ಸೆಲ್ ಸಂಚಾಲಕ ಪ್ರದೀಪ್ ಎಂ.ಕುಟ್ಟಕಣಿ, ವಿನಯನ್ ಕೋಟಿಕುಳಂ ಮೊದಲಾದವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಮಾತನಾಡಿ ಬಿಜೆಪಿ ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು.