ಮುಳ್ಳೇರಿಯ: ಗೋಸಾಡ ಶ್ರೀ ಮಹಿಷಮರ್ಧಿನಿ ಕ್ಷೇತ್ರದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ಬುಧವಾರ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿವರ್ಯರ ಆಚಾರ್ಯತ್ವದಲ್ಲಿ ಸಂಪನ್ನಗೊಮಡಿತು.
ಬೆಳಗ್ಗೆ 6 ಕ್ಕೆ ಗಣಪತಿ ಹವನ, 7 ರಿಂದ ಪಾವೂರಿನಿಂದ ಶ್ರೀಧೂಮಾವತಿ ದೈವದ ಭಂಡಾರ ಆಗಮನ, ಬಳಿಕ 8.44ರ ಬಳಿಕ 10ರ ಮಧ್ಯೆ ಮೀನಲಗ್ನ ಸುಮುಹೂರ್ತದಲ್ಲಿ ಮಹಿಷಮರ್ಧಿನಿ ಅಮ್ಮನವರ ಪುನಃ ಪ್ರತಿಷ್ಠೆ, ಜೀವಕಲಶಾಭಿಷೇಕ, ಪರಿವಾರ ದೇವರುಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಚಂಡಿಕಾ ಹೋಮ, ಮಂಗಲ ಮಂತ್ರಾಕ್ಷತೆ ನಡೆಯಿತು. ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಆಗಮಿಸಿ ದೇವರ ದರ್ಶನ ಪಡೆದು, ಬ್ರಹ್ಮಕಲಶಾಭಿಷೇಕದಲ್ಲಿ ಪಾಲ್ಗೊಂಡು, ಬಳಿಕ ಮಂತ್ರಾಕ್ಷತೆ ನೀಡಿ ಹರಸಿದರು.
ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಅಸಂಖ್ಯ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ರಾತ್ರಿ ಶ್ರೀಭೂತಬಲಿ ಉತ್ಸವ, ಅನ್ನಸಂತರ್ಪಣೆ ನಡೆಯಿತು.
ಸಾಂಸ್ಕøತಿ9ಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ಕ್ಕೆ ವಿದ್ವಾನ್ ರವೀಂದ್ರ ಭಟ್ ಗೋಸಾಡ ಹಾಗೂ ನೈವೇಲಿ ಆರ್. ಸಂತಾನಗೋಪಾಲನ್ ಶಿಷ್ಯವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಮಧ್ಯಾಹ್ನ ಗಾಯಕ ರತ್ನಾಕರ ಎಸ್ ಓಡಂಗಲ್ಲು ತಂಡದವರಿಂದ ಭಕ್ತಿ ಝೇಂಕಾರ ಪ್ರಸ್ತುತಿಗೊಂಡಿತು. ರಾತ್ರಿ ಮುಲ್ಕಿ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ನಾಗ ನಂದಿನಿ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.