ಕುಂಬಳೆ: ಅನಂತಪುರ ಶ್ರೀಅನಂತಪದ್ಮನಾಭ ಕ್ಷೇತ್ರದ ವಾರ್ಷಿಕ ಮಹೋತ್ಸವವು ಫೆ.27 ರಂದು ಗುರುವಾರ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
27 ರಂದು ಬೆಳಿಗ್ಗೆ 8 ರಿಂದ ಗಣಪತಿ ಹವನ, ವೇದ ಪಾರಾಯಣ, ಬಿಂಬಶುದ್ದಿ, ನವಕಾಭಿಷೇಕ, 8.30 ರಿಂದ ಕೆ.ವಿ.ರಾಜನ್ ಮಾರಾರ್ ಪಯ್ಯನ್ನೂರು ಅವರಿಂದ ಸೋಪಾನ ಸಂಗೀತ, 11 ರಿಂದ ತುಲಾಭಾರ ಸೇವೆ, 12.30 ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ರಿಂದ ದೀಪಾರಾಧನೆ, ಶಾಸ್ತಾರ ವನದಲ್ಲಿ ಭಜನೆ, ರಾತ್ರಿ 11 ರಿಂದ ಶ್ರೀಭೂತಬಲಿ, ಬೆಡಿಕಟ್ಟೆ ಪೂಜೆ, ರಾಜಾಂಗಣ ಪ್ರಸಾದ ವಿತರಣೆ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ 10 ರಿಂದ ಡಾ.ಕಸ್ತೂರಿ ವಿವೇಕ್ ಬೇಂಗ್ರೆ ಅವರಿಂದ ಗಾನಸುಧೆ, ಸಂಜೆ 7 ರಿಂದ ಸ್ಥಳೀಯ ಬಾಲಕ-ಬಾಲಕಿಯರಿಂದ ನೃತ್ಯ ಕಾರ್ಯಕ್ರಮಗಳು, ರಾತ್ರಿ 8 ರಿಂದ ಅನಂತ ಬಾಲಗೋಕುಲ ಸದಸ್ಯರಿಂದ ನೃತ್ಯ ಕಾರ್ಯಕ್ರಮ, ರಾತ್ರಿ 9.30 ರಿಂದ ಮಾವಿನಕಟ್ಟೆಯ ಅಯ್ಯಪ್ಪ ಸ್ವಾಮಿ ಯಕ್ಷಗಾನ ಕಲಾಸಂಘ ಹಾಗೂ ಅತಿಥಿ ಕಲಾವಿದರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮ್ಯೆ ಯಕ್ಷಗಾನ ಬಯಲಾಟ ನಡೆಯಲಿದೆ.