ಪೆರ್ಲ: ಪೆರ್ಲದ ಶ್ರೀ ವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಸ್ಥಾಪಕರ ಶಿಲಾಪ್ರತಿಮೆಯ ಅನಾವರಣ ಸಮಾರಂಭದ ವಾರ್ಷಿಕೋತ್ಸವವು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಮಂಗಳವಾರ ಅಪರಾಹ್ನ 2.30ಕ್ಕೆ ಜರುಗಿತು.
ಕರ್ನಾಟಕ ಬ್ಯಾಂಕ್ ಮಂಗಳೂರು ಇದರ ಪ್ರಧಾನ ಪ್ರಬಂಧಕ ಮಹಾಲಿಂಗೇಶ್ವರ ಕೆ ಮತ್ತು ಶ್ರೀವಿದ್ಯಾರಣ್ಯ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ.ಜಿ ರಾಮ ಭಟ್ ಇವರು ಸ್ಥಾಪಕರ ಶಿಲಾಪ್ರತಿಮೆಗೆ ಹಾರಾರ್ಪಣೆ ಮಾಡಿದರು. ಶಾಲಾ ಪ್ರಬಂಧಕ ಶ್ರೀಕೃಷ್ಣ ವಿಸ್ವಾಮಿತ್ರ, ನೆರೆದ ಗಣ್ಯರು, ಅಧ್ಯಾಪಕರು ಇನ್ನಿತರರು ಪುಷ್ಪಾರ್ಚನೆ ಮಾಡಿದರು.