ನವದೆಹಲಿ: ಕೇಂದ್ರ ಬಜೆಟ್ ನಲ್ಲಿ ಘೋಷಿಸಿರುವಂತೆ ಐಟಿಆರ್ ಫೈಲಿಂಗ್‍ಗಾಗಿ ಹೊಸ ತೆರಿಗೆ ಸ್ಲ್ಯಾಬ್, ತೆರಿಗೆ ಕಡಿತ ಹಾಗೂ ವಿನಾಯಿತಿಗಳನ್ನು ಅಂದಾಜಿಸಲು ಆದಾಯ ತೆರಿಗೆ ಇಲಾಖೆ ಇ-ಕ್ಯಾಲ್ಕುಲೇಟರ್ ಅನ್ನು ಪ್ರಾರಂಭಿಸಿದೆ.
ಹಳೆಯ ಮತ್ತು ಹೊಸ ತೆರಿಗೆಗಳನ್ನು ಹೋಲಿಸಲು ತುಲನಾತ್ಮಕ ಕೋಷ್ಟಕವನ್ನು ಹೊಂದಿರುವ ಕ್ಯಾಲ್ಕುಲೇಟರ್,ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‍ಸೈಟ್‍ನಲ್ಲಿಲಭ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವೆಬ್ ಪೆÇೀರ್ಟಲ್ ಅನ್ನು ಹಲವು ವರ್ಗದ ತೆರಿಗೆದಾರರುಎಲೆಕ್ಟ್ರಾನಿಕ್ ಆದಾಯ ತೆರಿಗೆ ರಿಟನ್ರ್ಸ್ (ಐಟಿಆರ್) ಗಳನ್ನು ಸಲ್ಲಿಸಲು ಬಳಸಲಾಗುತ್ತದೆ.ಸಾಮಾನ್ಯ ನಾಗರಿಕರ (60 ವರ್ಷಕ್ಕಿಂತ ಕಡಿಮೆ), ಹಿರಿಯ ನಾಗರಿಕ (60-79 ವರ್ಷ) ಮತ್ತು ಇನ್ನೂ ಹಿರಿಯ ನಾಗರಿಕ (79 ವರ್ಷಕ್ಕಿಂತ ಮೇಲ್ಪಟ್ಟ) ಮೂರು ವರ್ಗಗಳ ತೆರಿಗೆದಾರರು ಎಲ್ಲಾ ಮೂಲಗಳಿಂದ ತಮ್ಮ ಅಂದಾಜು ವಾರ್ಷಿಕ ಆದಾಯವನ್ನು ಇಲ್ಲಿ ಲೆಕ್ಕ ಹಾಕಬಹುದಾಗಿದೆ., ಒಟ್ಟು ಅರ್ಹ ಕಡಿತ ಹಾಗೂ ವಿನಾಯಿತಿಗಳು ಏನೆಲ್ಲಾ ಲಭ್ಯವಿದೆ ಎಂದು ನೋಡಲು ಅವರು ಹಳೆಯ ಮಾದರಿಯಲ್ಲಿ ಎಷ್ಟು ತೆರಿಗೆ ಅಥವಾ ಹೊಸ ಮಾದರಿಯನ್ನು ಅನುಸರಿಸಿದರೆ ಎಷ್ಟು ತೆರಿಗೆ ಬೀಳಲಿದೆ ಎನ್ನುವ ಲೆಕ್ಕಾಚಾರ ಇದರಲ್ಲಿ ಲಭ್ಯವಿದೆ.
ಕ್ಯಾಲ್ಕುಲೇಟರ್ 2020 ರ ಬಜೆಟ್ಮೆಮೋರಾಂಡಮ್ ನಿಂದ ಹೊರತೆಗೆದ ಹೊಸ ಆಡಳಿತದಡಿಯಲ್ಲಿ ಪ್ರಸ್ತಾಪಿಸಿದಂತೆ ಅರ್ಹ ವಿನಾಯಿತಿಗಳು ಮತ್ತು ಕಡಿತಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ.ಹೊಸ ವೈಯಕ್ತಿಕ ಆದಾಯ ತೆರಿಗೆಯಲ್ಲಿಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದಂತೆ, ವಾರ್ಷಿಕ ಆದಾಯಕ್ಕೆ 2.5 ಲಕ್ಷದಿಂದ 5 ಲಕ್ಷ ದವರೆವಿಗೆ ಶೇ. 5ರ ತೆರಿಗೆ ಅನ್ವಯಿಸಲಿದೆ. ಅಲ್ಲದೆ ಅದಕ್ಕೆ ಮುಂದೆ ಪ್ರತಿ 2.5 ಲಕ್ಷ ರು. ಆದಾಯ ಹೆಚ್ಚಳಕ್ಕೆ ತೆರೆಗೆ ದರವು ಶೇ 10, 15 ಹಾಗೂ 20, 25ರಷ್ಟು ಹೆಚ್ಚಳವಾಗುತ್ತದೆ. 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯಕ್ಕಾಗಿ ಶೇ 30 ರಷ್ಟು ತೆರಿಗೆ ವಿಧಿಸಲಾಗುತ್ತದೆ.