ಮಂಜೇಶ್ವರ: ವಿಶ್ವಕರ್ಮ ಸಾಹಿತ್ಯ ದರ್ಶನ ಪ್ರಕಾಶನದ ಆಶ್ರಯದಲ್ಲಿ ಕೃತಿ ಯೋಜನೆಯನ್ವಯ ಪ್ರಕಟಿತಗೊಂಡ ಮೂರನೇಯ ಕೃತಿ `ವಿಶ್ವಪ್ರಭಾ' ಸಾಹಿತ್ಯ ಸಂಕಲನವನ್ನು ಹೊಸಂಗಡಿಯ ಆರ್.ಬಿ.ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ವಿಶ್ವದರ್ಶನ ಸಾಹಿತ್ಯ ಸಾಂಸ್ಕøತಿಕ ಸಮ್ಮೇಳನದಲ್ಲಿ ಬಿಡುಗಡೆಗೊಳಿಸಲಾಯಿತು.
ಹಿರಿಯ ಸಾಹಿತಿ ಹರೀಶ್ ಆಚಾರ್ಯ ಕುಂಬಳೆ ಪುಸ್ತಕ ಬಿಡುಗಡೆಗೊಳಿಸಿದರು. ಪತ್ರಕರ್ತೆ, ಕವಯತ್ರಿ ಪಾವನದಾಸ್ ಆಚಾರ್ಯ ಕೋಟೆಕ್ಕಾರ್ ಕೃತಿ ಪರಿಚಯ ಮಾಡಿದರು. ಪುರೋಹಿತ್ ಮೌನೇಶ್ ಆಚಾರ್ಯ ಪುತ್ತಿಗೆ ಪ್ರಕಟಿತ ಗುರು ಸಂದೇಶ ವಾಚನಗೈದರು. ವಿಶ್ವಪ್ರಭಾ ಪುಸ್ತಕದ ಸಂಪಾದಕ ಜಯ ಮಣಿಯಂಪಾರೆ ಹಾಗೂ ಅತಿಥಿ ಗಣ್ಯರು ಉಪಸ್ಥಿತರಿದ್ದರು. ವಿಶ್ವಕರ್ಮ ಸಾಹಿತ್ಯ ದರ್ಶನ ಪ್ರಕಾಶನದ ವತಿಯಿಂದ ಕಾವ್ಯ ಶಿಲ್ಪ ಕವನ ಸಂಕಲನ, ಅಣುರೇಣು ಹನಿಗವನ ಸಂಕಲನ ಪ್ರಕಟಗೊಂಡಿದ್ದು ಇದೀಗ ವಿಶ್ವಪ್ರಭಾ ಮೂರನೇಯ ಕೃತಿಯಾಗಿ ಪ್ರಕಾಶಿತಗೊಂಡಿದೆ.