ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕೂಟಮಹಾಜಗತ್ತು ಸಾಲಿಗ್ರಾಮ ಕಾಸರಗೋಡು ಅಂಗಸಂಸ್ಥೆಯ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಎಂ.ಕಾಂ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 6 ನೇ ರ್ಯಾಂಕ್ ಪಡೆದ ಸ್ವಾತಿ ಮಯ್ಯ ಅವರನ್ನು ಭಾನುವಾರ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಈಕೆ ಕುಕ್ಕಂಗೋಡ್ಲು ಕೇಶವ ಮಯ್ಯ-ಲಕ್ಷ್ಮಿ ದಂಪತಿಗಳ ಸುಪುತ್ರಿ.